ಹೊಸಕೋಟೆ: ಇಲ್ಲಿಗೆ ಸಮೀಪದ ನಿಂಬೇಕಾಯಿಪುರ ಬಳಿ ಚರಣ್ಪಾಲ್ ಸಿಂಗ್ ಎಂಬುವವರಿಗೆ ಸೇರಿದ ಫಾರಂ ಹೌಸ್ನ ಬಾಗಿಲ ಬೀಗ ಮುರಿದು ಒಳನುಗ್ಗಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆವಲಹಳ್ಳಿ ಠಾಣೆ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಟಿವಿ, ಫ್ರಿಡ್ಜ್, ಡಿವಿಡಿ ಮುಂತಾದ ಗೃಹೋಪಯೋಗಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಿಂಬೇಕಾಯಿಪುರದ ಆನಂದ (21) ಬಂಧಿತ ಆರೋಪಿ. ಈತ ತನ್ನ ಸ್ನೇಹಿತರಾದ ನವೀನ, ನಾರಾಯಣ ಮತ್ತು ನಾಗೇಶ ಎಂಬುವಬರ ಜೊತೆಗೂಡಿ ಮಾರ್ಚ್ 22ರ ರಾತ್ರಿ ಈ ಕೃತ್ಯ ಎಸಗಿದ್ದ. ಸಿಪಿಐ ಎಂ.ಮಲ್ಲೇಶ್ ಹಾಗೂ ಸಿಬ್ಬಂದಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.