ವಿಜಾಪುರ:  `ಇಲ್ಲಿಯ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಆಹಾರ ಸಾಮಗ್ರಿ-ಅಡುಗೆ ಅನಿಲ ಖಾಲಿ ಆಗಿದೆ. ಕುಡಿಯಲು ನೀರು ಸಹ ದೊರೆಯುತ್ತಿಲ್ಲ. ಕೊರೆಯುವ ಚಳಿಯಿಂದ ವಯೋವೃದ್ಧರು ನಲುಗಿ ಹೋಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಎಂಬುದು ಮರೀಚಿಕೆಯಾಗಿದೆ. ಕರ್ನಾಟಕ ಸರ್ಕಾರವೇ ಹೆಲಿಕಾಪ್ಟರ್ ಕಳಿಸಿ ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಬೇಕು...'

ಉತ್ತರ ಭಾರತ ಪ್ರವಾಸಕ್ಕೆ ತೆರಳಿರುವ, `ಜಲ ಪ್ರಳಯ'ದ ಹಿನ್ನೆಲೆಯಲ್ಲಿ ಬದರಿನಾಥದಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಆಶ್ರಯ ಪಡೆದಿರುವ ವಿಜಾಪುರದ ಕಿರಣ ಕಟ್ಟಿ ಅವರ ಕಳಕಳಿಯ ಮನವಿ ಇದು.

ನಗರದ ಗೋಡಬೋಲೆ ಮಾಳಾ ಗುಂಡಬಾವಡಿಯ ನಿವಾಸಿ ಕಿರಣ ಕಟ್ಟಿ, ಮನೆಯಲ್ಲಿರುವ ತಮ್ಮ ಚಿಕ್ಕಪ್ಪ ರವಿ ಕಟ್ಟಿ ಅವರಿಗೆ ದೂರವಾಣಿ ಕರೆ ಮಾಡಿ, ಅಲ್ಲಿ ತಾವು ಎದುರಿಸುತ್ತಿರುವ ತೊಂದರೆ ವಿವರಿಸಿದರು.

ಕಿರಣ ಕಟ್ಟಿ ಅವರ ಕುಟುಂಬದ 15 ಜನ, ಕರ್ನಾಟಕ ಬ್ಯಾಂಕ್ ಉದ್ಯೋಗಿ ಪ್ರದೀಪ್ ಓಂಕಾರ ಕುಟುಂಬದ ಏಳು ಜನ, ಕೊಲ್ಹಾರದ ನಾಲ್ವರು ಸೇರಿದಂತೆ ಜಿಲ್ಲೆಯ 30ಕ್ಕೂ ಹೆಚ್ಚು ಜನ ಬದರಿನಾಥ ಬಳಿಯ ಬಂಗಾಡಿ ಛತ್ರದಲ್ಲಿ ಆಶ್ರಯ ಪಡೆದಿದ್ದಾರೆ.

`ಬದರಿನಾಥ ಮಂದಿರ ಬಳಿಯ ಬಂಗಾಡಿ ಛತ್ರದಲ್ಲಿ ನಮ್ಮನ್ನು ಇಳಿಸಿದ್ದಾರೆ. ನಮ್ಮ ಟ್ರಾವೆಲ್ ಏಜೆಂಟರು ತಮ್ಮ ಬಳಿ ಇದ್ದ ಆಹಾರ ಧಾನ್ಯ, ಅಡುಗೆ ಅನಿಲದ ಸಹಾಯದಿಂದ ಊಟ ತಯಾರಿಸಿ ನೀಡುತ್ತಿದ್ದರು. ಈಗ ಅವೆಲ್ಲ ಮುಗಿದಿವೆ. ಕುಡಿಯಲು ನೀರಿಲ್ಲ. ಹಿಮಮಿಶ್ರಿತ ನೀರೇ ಗತಿ. ಡೀಸೆಲ್ ಮುಗಿಯುತ್ತಿರುವುದರಿಂದ ರಾತ್ರಿ ಅರ್ಧಗಂಟೆ ಮಾತ್ರ ಜನರೇಟರ್ ಚಾಲೂ ಮಾಡುತ್ತಾರೆ. ಅಷ್ಟರಲ್ಲಿಯೇ ನಮ್ಮ ಮೊಬೈಲ್ಗಳನ್ನು ಚಾರ್ಜ್ ಮಾಡಿಕೊಳ್ಳಬೇಕು' ಎಂದರು.

`ಸುತ್ತಲಿನ ನಾಲ್ಕಾರು ಛತ್ರ, ಮಠಗಳಲ್ಲಿ ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ನಿನ್ನೆ ಕೇವಲ ಆರು ಜನರನ್ನು ಮಾತ್ರ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗಿದೆ. 40 ಕಿ.ಮೀ. ಅಂತರದಲ್ಲಿರುವ ಜೋಶಿಮಠಕ್ಕೆ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸುತ್ತೇವೆ. ಅಲ್ಲಿಂದ ನೀವು ರಸ್ತೆ ಮೂಲಕ ಹೋಗಬಹುದು. ಅದಕ್ಕೆ ಕೂಪನ್ ಪಡೆದುಕೊಳ್ಳಿ ಎಂದು ಹೇಳಿದ್ದರು. ಗುರುವಾರ ನಸುಕಿನ 4 ಗಂಟೆಯಿಂದ ಸರದಿ ಸಾಲಿನಲ್ಲಿ ನಿಂತರೂ ಇನ್ನೂ ಕೂಪನ್ ಕೊಟ್ಟಿಲ್ಲ. ಹೆಲಿಕಾಪ್ಟರ್ ಬಂದರೂ ಕೆಳಗಿಳಿಯಲು ಸಾಧ್ಯವಾಗಲಿಲ್ಲ' ಎಂದು ಅವರು ಅಲ್ಲಿಯ ವಸ್ತುಸ್ಥಿತಿ ವಿವರಿಸಿದರು.

`ಹೃದಯ ರೋಗ, ಮಧುಮೇಹ, ವಯೋಸಹಜ ಕಾಯಿಲೆ ಇರುವ ವೃದ್ಧರೇ ಹೆಚ್ಚಾಗಿದ್ದಾರೆ. ಹೆಲಿಕಾಪ್ಟರ್ ಮೂಲಕ ನಮ್ಮನ್ನು ಡೆಹ್ರಾಡೂನ್ ಇಲ್ಲವೆ ದೆಹಲಿಗೆ ಸ್ಥಳಾಂತರಿಸಲಿ. ಅಲ್ಲಿಂದ ನಾವು ನಮ್ಮೂರಿಗೆ ಬರುತ್ತೇವೆ. ರಾಜ್ಯ ಸರ್ಕಾರ ತಕ್ಷಣವೇ ಹೆಲಿಕಾಪ್ಟರ್ಗಳನ್ನು ಕಳಿಸಿಕೊಡಬೇಕು' ಎಂದು ಮನವಿ ಮಾಡಿದರು.

ವಿಜಾಪುರದ ಬಣ್ಣದ ವರ್ತಕ ಜಯಂತ ಕಟ್ಟಿ (67), ಉಮಾ ಜಯಂತ ಕಟ್ಟಿ (62), ಕಿರಣ ಜಯಂತ ಕಟ್ಟಿ (32), ಕೀರ್ತಿ ಕಿರಣ ಕಟ್ಟಿ (28), ಕಿಶೋರ ಜಯಂತ ಕಟ್ಟಿ (37), ಕಾಂಚನ ಕಿಶೋರ ಕಟ್ಟಿ, ಎರಡೂವರೆ ವರ್ಷದ ಆದಿತ್ಯ ಕಿಶೋರ ಕಟ್ಟಿ, ಜಯಂತ ಅವರ ಪುತ್ರಿ ಪ್ರೇಮಾ, ಅಳಿಯ ಹೈದರಾಬಾದ್ನ ನಾರಾಯಣ ಜಹಗೀರದಾರ, ಸಂಬಂಧಿಗಳಾದ ಕೊಪ್ಪಳದ ಗೋವಿಂದರಾವ್, ನಾಗರತ್ನ, ಸುಧಾಮಣಿ, ಹುಬ್ಬಳ್ಳಿಯ ಪಾಂಡುರಂಗ, ತಾರಾಬಾಯಿ, ಪ್ರಶಾಂತ ಹೀಗೆ ಒಂದೇ ಕುಟುಂಬದ 15 ಜನ.

ಕೊಲ್ಹಾರದ ಭೀಮಾಚಾರ್ಯ ಪಾಶ್ಚಾಪುರೆ, ಕಮಲಾ ಭೀಮಾಚಾರ್ಯ ಪಾಶ್ಚಾಪುರೆ, ಜಯತೀರ್ಥ ನರಸಿಂಹ ಕಟ್ಟಿ, ಮಂಗಲಾ ಜಯತೀರ್ಥ ಕಟ್ಟಿ.
ಸ್ಥಳೀಯ ಅಡವಿಚಾರ್ಯ ಜೋಶಿ, ಅವರ ಪತ್ನಿ ಸಂಧ್ಯಾ, ಕರ್ನಾಟಕ ಬ್ಯಾಂಕ್ ಸ್ಥಳೀಯ ಶಾಖೆಯ ಉದ್ಯೋಗಿ ಪ್ರದೀಪ್ ಓಂಕಾರ, ವಿದ್ಯಾಬಾಯಿ ನಾರಾಯಣರಾವ್ ಓಂಕಾರ (65), ಪ್ರಜ್ಞಾ ಓಂಕಾರ ಮತ್ತು ಅವರ ಇಬ್ಬರ ಮಕ್ಕಳು, ಅವರ ಸಂಬಂಧಿ ಅಮೀನಗಡದ ಬದರೀನಾಥ ಕುಲಕರ್ಣಿ, ಮಂದಾ ಕುಲಕರ್ಣಿ ಹಾಗೂ ಗಲಗಲಿಯ ಗುಂಡೂರಾವ್ ಅಥಣಿ, ರೇವತಿ ಅಥಣಿ ಅವರೆಲ್ಲ ಅಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

`ಇವರೆಲ್ಲ ಹೈದರಾಬಾದ್ ಟ್ರಾವೆಲ್ ಏಜೆನ್ಸಿ ಮೂಲಕ ಕಳೆದ 2 ರಂದು ಪ್ರಯಾಣ ಬೆಳೆಸಿದ್ದರು. ಗುರುವಾರ ಇಲ್ಲಿಗೆ ವಾಪಸಾಗಬೇಕಿತ್ತು. ಭಾನುವಾರ ಬೆಳಿಗ್ಗೆ ಕರೆ ಮಾಡಿ ಬದರಿನಾಥದಿಂದ ವಾಪಸಾಗುತ್ತಿದ್ದೇವೆ ಎಂದರು. ಆ ನಂತರ ಮೂರು ದಿನ ಸಂಪರ್ಕ ಕಡಿತಗೊಂಡಿತು. ಮಂಗಳವಾರ ಮಧ್ಯಾಹ್ನ ಕರೆ ಮಾಡಿ ತಾವು ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದರು' ಎಂದು ಶ್ವೇತಾ ರವಿ ಕಟ್ಟಿ ಹೇಳಿದರು.

`ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಮಾಡಿದ್ದೇವೆ. ರಾಜ್ಯದಿಂದ ಅಲ್ಲಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳೊಂದಿಗೆ ಅವರೂ ಸಂಪರ್ಕದಲ್ಲಿದ್ದಾರೆ. ಎಲ್ಲ ರಾಜ್ಯ ಸರ್ಕಾರಗಳು ಹೆಲಿಕಾಪ್ಟರ್ಗಳನ್ನು ಕಳುಹಿಸಿ ತಮ್ಮ ಜನರನ್ನು ರಕ್ಷಿಸುತ್ತಿವೆ. ನಮ್ಮ ಸರ್ಕಾರವೂ ಆ ಕೆಲಸ ಮಾಡಬೇಕು' ಎಂದು ರವಿ ಕಟ್ಟಿ, ಶಿರೀಶ್ ಕಟ್ಟಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.