ಧಾರವಾಡ: ‘ಆನು ಒಲಿದಂತೆ ಹಾಡುವೆ...’ ಎಂಬ ಸಾಲುಗಳನ್ನು ಬಸವಣ್ಣ ಇಂದು ಬರೆದಿದ್ದರೆ ಅಥವಾ ಹಿಂದೂ ಧರ್ಮದ ಕುರಿತಾಗಿ ಅಂಬೇಡ್ಕರ್ ಅವರು ಈಗ ಲೇಖನಗಳನ್ನು ಬರೆದಿದ್ದರೆ ಇಬ್ಬರೂ ಸೆರೆಮನೆಯಲ್ಲಿ ಇರುತ್ತಿದ್ದರು...ಇಂತಹದ್ದೊಂದು ಆತಂಕ ವ್ಯಕ್ತಪಡಿಸಿದ್ದು ಹಿರಿಯ ವಿಮರ್ಶಕ ಸಿ.ಎನ್. ರಾಮಚಂದ್ರನ್.

‘ಭಾರತದಲ್ಲಿ ಇಂದು ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನಿಜಕ್ಕೂ ಇದೆಯೇ ಎಂಬ ಪ್ರಶ್ನೆಯನ್ನು ಮಾಧ್ಯಮಗಳು ಸೇರಿದಂತೆ ಯಾರೊಬ್ಬರು ಗಂಭೀರವಾಗಿ ಪ್ರಶ್ನೆ ಮಾಡಿಕೊಳ್ಳುತ್ತಿಲ್ಲ. ಇದರಿಂದಾಗಿ ಸಂವಿಧಾನದಲ್ಲಿ ಬದಲಾವಣೆ ಆಗಬೇಕೆ ಎಂಬ ಪ್ರಶ್ನೆ ಕೂಡ ಮೂಡುತ್ತದೆ. ಆಗಬೇಕು ಎಂದರೂ ಅದನ್ನು ಮಾಡಲಿಕ್ಕೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ‘ಧಾರವಾಡ ಸಾಹಿತ್ಯ ಸಂಭ್ರಮ- ೨೦೧೪’ರ ಮೂರನೇ ದಿನ ನಡೆದ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಕುರಿತ ಗೋಷ್ಠಿ-ಯಲ್ಲಿ ಅವರು ಅಭಿಪ್ರಾಯಪಟ್ಟರು.

‘ಸಂವಿಧಾನದ ಕಲಂ ೧೯(೧) ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಹೇಳಿದರೆ, ಕಲಂ ೧೯(೨) ಅದರ ಮಿತಿಗಳನ್ನು ವಿವರಿಸುತ್ತದೆ. ಜಗತ್ತಿನಲ್ಲಿ ಅಮೆರಿಕ ಹೊರತುಪಡಿಸಿದರೆ ಯಾವ ದೇಶದಲ್ಲೂ ಪೂರ್ಣ ಪ್ರಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನೇಕ ಮಿತಿಗಳಿವೆ. ಕಾರಣವಿಷ್ಟೇ, ೧೯೭೨ರಲ್ಲಿ ಸಂವಿಧಾನದ ಕಲಂ ಅನ್ನು ಸಂಪೂರ್ಣವಾಗಿ ಬದಲಾವಣೆ ಮಾಡಿರುವುದು. ಆ ಕಾಲಘಟ್ಟದಲ್ಲಿ ಅದು ಅವಶ್ಯಕವಾಗಿದ್ದಿರಬಹುದು ಎಂದು ಅಭಿಪ್ರಾಯಪಟ್ಟರು.

ಆಗತಾನೆ ಪಾಕಿಸ್ತಾನದ ಜೊತೆ ಯುದ್ಧ ಮುಗಿದಿತ್ತು, ಮೂರು ಲಕ್ಷ ಪಾಕ್ ಸೈನಿಕರು ನಮ್ಮ ಜೈಲುಗಳಲ್ಲಿ ಇದ್ದರು. ಶಿವಸೇನೆಯಂತಹ ಪ್ರಾಂತೀಯ ಸಂಘಟನೆಗಳು ಜನ್ಮ ತಾಳಿ ಪ್ರಬಲವಾಗತೊಡಗಿದ್ದವು. ಇವುಗಳ ಮೇಲೆ ನಿಯಂತ್ರಣ ಸಾಧಿಸಲು ಇಂದಿರಾ ಗಾಂಧಿ ಅವರು ಸಂವಿಧಾನದ ೧೫೩ನೇ ಕಲಂಗೆ ತಿದ್ದುಪಡಿ ಮಾಡಿ ೧೫೩(ಎ), ೧೫೩(ಬಿ) ಸೇರಿಸಿದರು ಎಂದು ವಿವರಿಸಿದರು.

ಇವು ಎಷ್ಟರಮಟ್ಟಿಗೆ ಪ್ರಭಾವಶಾಲಿಯಾಗಿವೆ ಎಂದರೆ, ನಾವು ಇನ್ನೊಬ್ಬ ಮತೀಯನ ಕಡೆಗೆ, ಆತನ ಪೂಜಾ ಸ್ಥಳದ ಕುರಿತಾಗಿ ಅಥವಾ ಅವರ ಧರ್ಮ ಗ್ರಂಥದ ಕಡೆಗೆ ಕಣ್ಣು ಹಾಯಿಸಿದರೂ ಅದು ಶಿಕ್ಷಾರ್ಹ ಅಪರಾಧ ಎನ್ನುವಷ್ಟರ ಮಟ್ಟಿಗೆ ಇದೆ. ಮುಂದೆ ಸಂಭವಿಸಬಹುದಾದ ಘಟನೆಯ ಆಧಾರದ ಮೇಲೆ ಯಾರನ್ನೂ ಕೂಡ ಬಂಧಿಸಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಇದು ಮುದ್ರಣ ಮತ್ತು ದೃಶ್ಯ ಮಾಧ್ಯಮಕ್ಕೂ ಅನ್ವಯಿಸುತ್ತದೆ. ಇದನ್ನು ಪೊಲೀಸರು ಅಥವಾ ಇನ್ಯಾರಾದರು ಗಂಭೀರವಾಗಿ ತೆಗೆದುಕೊಂಡರೆ ಚುನಾವಣೆ ಸಂದರ್ಭದಲ್ಲಿ ಭಾಷಣ ಮಾಡುವ ರಾಜಕಾರಣಿಗಳನ್ನು, ಪತ್ರಿಕೆಗಳಲ್ಲಿ ಲೇಖನ ಬರೆಯುವವರನ್ನೂ ಬಂಧಿಸಬಹುದು’ ಎಂದರು.

ಕಳೆದ ೨೫ ವರ್ಷಗಳಲ್ಲಿ ೩೦೦ಕ್ಕೂ ಹೆಚ್ಚು ಜನ ಸಾಹಿತಿಗಳು, ಕಲಾವಿದರನ್ನು ಬಂಧಿಸಲಾಗಿದೆ. ಇದರಲ್ಲಿ ಇನ್ನು ಕೆಲವರು ಜೈಲಿನಲ್ಲಿದ್ದಾರೆ. ‘ಢುಂಢಿ’ ಕೃತಿ ಲೇಖಕ ಯೋಗೇಶ್ ಮಾಸ್ಟರ್ ಅವರನ್ನು ಬಂಧಿಸಲು ಯಾವುದೇ ಕಾರಣವಿರಲಿಲ್ಲ. ಆದರೂ ಪೊಲೀಸರು ದೂರು ನೀಡಿದ ತಕ್ಷಣವೇ ಅವರನ್ನು ಬಂಧಿಸಿದ್ದರು. ಬೆಂಗಳೂರಿನಲ್ಲಿ ಭಗವಾನ್ ಪ್ರಚೋದನಕಾರಿ ಭಾಷಣ ಮಾಡದಿದ್ದರೂ ಅವರ ವಿರುದ್ಧ ಪ್ರಕರಣ ಹೂಡಲಾಯಿತು. ವೇದಿಕೆ ಮೇಲಿದ್ದ ಗೋವಿಂದರಾವ್ ಅವರು ಭಗವಾನ್ ಮಾತುಗಳನ್ನು ವಿರೋಧಿಸಲಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧವೂ ಮೊಕದ್ದಮೆ ಹಾಕಲಾಗಿತ್ತು. ಇಂದಿಗೂ ಇವರಿಬ್ಬರು ಕೋರ್ಟ್ಗೆ ಅಲೆಯುತ್ತಿದ್ದಾರೆ.

ಕತ್ತಲೆ ಯುಗದ ಮೌಲ್ಯಗಳು: ೧೯೯೩ರಲ್ಲಿ ನ್ಯಾನ್ಸಿ ಅಡಾಜಾನಿಯಾ ಎಂಬ ಸಂಶೋಧಕಿಯ ‘ಮಿಥ್ -ಸೂಪರ್ ಮಿಥ್’ ಸಂಶೋಧನಾ ಪ್ರಬಂಧ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾದ ದಿನವೇ ಅವರನ್ನು ಬಂಧಿಸಲಾಯಿತು. ಮಹಾರಾಷ್ಟ್ರದ ಎಲ್ಲ ನಗರಗಳಲ್ಲಿ ಅದರ ಪ್ರತಿಗಳನ್ನು ಸಾರ್ವಜನಿಕವಾಗಿ ಸುಡಲಾಗಿತ್ತು. ‘ಒಂದು ಹೊಸ ರಾಷ್ಟ್ರ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಕೆಲವು ಮಹನೀಯರನ್ನು ಪೂಜನೀಯರನ್ನು (ಐಕಾನ್) ಮಾಡಲು ಹೊರಡುತ್ತದೆ’ ಎಂಬ ಅಂಶ ಹೊರತುಪಡಿಸಿದರೆ ಯಾವುದೇ ಧರ್ಮದ ವಿರುದ್ಧ ಆಕೆ ಬರೆದಿರಲಿಲ್ಲ. ಮಹಾರಾಷ್ಟ್ರದಲ್ಲಿ ಶಿವಾಜಿ, ರಾಜಸ್ತಾನದಲ್ಲಿ ಮಹಾರಾಣಾ ಪ್ರತಾಪ್ ಅವರನ್ನು ಉದಾಹರಣೆಯಾಗಿ ನೀಡಿದ್ದರು. ಇದೊಂದು ಅಂಶ ಬರೆದದ್ದಕ್ಕೆ ಅವರನ್ನು ಜೈಲಿಗೆ ಹಾಕಲಾಗಿತ್ತು. ಜಾಮೀನು ಸಿಗದೇ ಮೂರು ತಿಂಗಳು ಆಕೆ ಜೈಲಿನಲ್ಲಿ ಇರಬೇಕಾಯಿತು. ಬಳಿಕ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಅಂದಿನ ನ್ಯಾಯಮೂರ್ತಿ ಎಂ.ಎಫ್.ಸಲ್ಡಾನಾ ಅವರು, ಕಾನೂನಿನ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿ ಜಾಮೀನು ನೀಡಿದ್ದರು. ‘ಕತ್ತಲೆ ಯುಗದ ಮೌಲ್ಯಗಳನ್ನು ನಾವು ಅನುಸರಿಸಬೇಕೆ’ ಎಂದೂ ಪ್ರಶ್ನಿಸಿದ್ದರು.

ಎಲ್ಲ ಹಂತದಲ್ಲೂ ಅಭಿವ್ಯಕ್ತಿಗೆ ವಿರೋಧ...: ಚಂದ್ರಶೇಖರ ಪಾಟೀಲ (ಚಂಪಾ) ಅವರು ಮಾತನಾಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಮಾತು ಬಂದಾಗ ತುರ್ತು ಪರಿಸ್ಥಿತಿ ವಿರುದ್ಧ ನಾನು, ಪಟ್ಟಣಶೆಟ್ಟಿ ಹಾಗೂ ಇತರರು ಬೀದಿ ನಾಟಕ ಆಡಿದ್ದು, ಜೈಲಿಗೆ ಹೋಗಿದ್ದು, ಬಳಿಕ ಡಾ. ಎಂ.ಎಂ.ಕಲಬುರ್ಗಿ ಅವರ ‘ಮಾರ್ಗ’ ಕಣ್ಣಮುಂದೆ ಬರುತ್ತದೆ. ಬಲಾಢ್ಯವಾದ ಅವರ ಸಮುದಾಯವೇ ಅದರ ನಿಷೇಧಕ್ಕೆ ಚಳವಳಿ ನಡೆಸಿತ್ತು. ಈ ಬಗ್ಗೆ ‘ಸಂಕ್ರಮಣ’ದಲ್ಲಿ ಒಂದು ಲೇಖನ ಸಹ ಬರೆದಿದ್ದೆ. ಧಾರವಾಡದ ಕಡಪ ಮೈದಾನದಲ್ಲಿ ಶಿವಪ್ರಕಾಶರ ‘ಮಹಾಚೈತ್ರ’ ಮತ್ತು ಲಂಕೇಶ್ ಅವರ ‘ಸಂಕ್ರಾಂತಿ’ ನಾಟಕಕ್ಕೆ ನನ್ನ ನೇತೃತ್ವದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಕೆಲವರು ನಾಟಕ ಆಡಲು ಬಿಡುವುದಿಲ್ಲ. ಮುಂದೇನಾಗ್ತದ್ ಗೊತ್ತಿಲ್ಲ ಅಂತ ಬೆದರಿಕೆ ಹಾಕ್ ಹೋಗಿದ್ರು. ಆಮೇಲೆ ಗೊತ್ತಾಯಿತು, ‘ಚಂಪಾನನ್ನ ಹುಚ್ಚು ನಾಯಿಗೆ ಹೊಡ್ದಾಂಗ ಹೊಡಿರಿ’ ಎಂದು ಸ್ವಾಮೀಜಿಯೊಬ್ಬರು ಆದೇಶ ಮಾಡಿದ್ದ ಸಂಗತಿ ನಂತರ ತಿಳಿಯಿತು.

’ಅವ್ರು ಅಂದು ನನ್ನ ಹೊಡೀತಿದ್ರು, ಆದ್ರೆ ನಾನು ಹುಚ್ಚು ನಾಯಿ ಆಗಿರಲಿಲ್ಲ’ ಎಂಬ ಸಂಗತಿಗಳನ್ನು ಹೇಳುವುದರ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೇಗೆ ತೊಡಕುಗಳು ಉಂಟಾಗುತ್ತವೆ ಎನ್ನುವುದನ್ನು ಅವರೇ ಎದುರಿಸಿದ ಘಟನೆಗಳನ್ನು ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ವಿವರಿಸಿದಾಗ ಇಡೀ ಸಭೆ ಒಂದು ಕ್ಷಣ ನಗೆಗಡಲಲ್ಲಿ ತೇಲಾಡಿತ್ತು. ‘ಆ ಚಳವಳಿಗಳಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ ಅಂದುಕೊಂಡಿದ್ದೇನೆ’ ಎಂದು ಕೊನೆಯಲ್ಲಿ ಮಾತು ಸೇರಿಸಿದರು.

‘ಭೈರಪ್ಪನವರ ಪರ ಮತ್ತು ವಿರೋಧದ ಕುರಿತಾಗಿ ಪತ್ರಿಕೆಗಳಲ್ಲಿ ವರದಿಗಳು ಪ್ರಕಟಗೊಳ್ಳುತ್ತವೆ. ಆದರೆ, ಯು.ಆರ್. ಅನಂತಮೂರ್ತಿ ವಿರುದ್ಧ ಕೆಲ ಪತ್ರಿಕೆಗಳು ವರದಿಗಳನ್ನೇ ಪ್ರಕಟಿಸುವುದಿಲ್ಲ. ಕೆಲ ಸ್ಥಾಪಿತ ಹಿತಾಸಕ್ತಿಗಳ ಹುನ್ನಾರದಿಂದ ಇಂತಹದ್ದೆಲ್ಲ ನಡೆಯುತ್ತಿರುವುದು ಅರಿವಿಗೆ ಬರುತ್ತದೆ’ ಎಂದರು.

ಪ್ರಗತಿಪರ ಸಾಹಿತಿಗಳಿಂದಲೂ ಏನು ಆಗಲಿಲ್ಲ...: ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರು ಮಾತನಾಡಿ, ‘ಪ್ರಗತಿಪರ ಲೇಖಕರೆಲ್ಲರೂ ಸಿದ್ದರಾಮಯ್ಯನವರ ಪರ ಇದ್ದರೂ ‘ಢುಂಢಿ’ ಕೃತಿಯ ಲೇಖಕ ಯೋಗೇಶ್ ಮಾಸ್ಟರ್ ಅವರನ್ನು ಬಂಧಿಸಲಾಯಿತು. ಒಬ್ಬ ಪ್ರಗತಿಪರ ಲೇಖಕ ಕೂಡ ಅದರ ವಿರುದ್ಧ ಚಕಾರ ಎತ್ತಲಿಲ್ಲ. ‘ಢುಂಢಿ’ಗೆ ಎದುರಾದದ್ದು ಯಾವುದೇ ಸಮುದಾಯವಲ್ಲ. ಅದರಲ್ಲಿ ಕೆಲವರ ಕೈವಾಡ ಇತ್ತು. ಅದನ್ನೇ ಕೆಲ ಪತ್ರಿಕೆಗಳು ದೊಡ್ಡದಾಗಿ ಸೃಷ್ಟಿಸಿದ್ದವು. ಆದಕಾರಣ ದುಷ್ಟಶಕ್ತಿಗಳನ್ನು ಗುರುತಿಸುವ ಕೆಲಸ ಮೊದಲು ಆಗಬೇಕು’ ಎಂದು ಸಲಹೆ ಮಾಡಿದರು.

’ಒಬ್ಬ ಪತ್ರಕರ್ತನಾಗಿ ನನಗೆ ರೂಪಕಗಳ ಆಶ್ರಯವಿಲ್ಲ. ಎಲ್ಲ ವಿಷಯಗಳನ್ನು ನೇರವಾಗಿ ಬರೆಯಬೇಕಾಗುತ್ತದೆ. ಒಬ್ಬ ಕಥೆಗಾರ ಅಥವಾ ನಾಟಕಕಾರ ರೂಪಕಗಳ ಮೂಲಕ ವಿಷಯವನ್ನು ಹೇಳಬಹುದು. ಆದರೆ, ಅದು ನನಗೆ ಸಾಧ್ಯವಾಗುವುದಿಲ್ಲ. ಒಬ್ಬ ರಾಜಕಾರಣಿ ಪರಮ ಭ್ರಷ್ಟ, ಲಂಪಟ ಅಥವಾ ನೀಚ ಅಂತ ತಿಳಿದಿದ್ದರೂ ಅವನ ವಿರುದ್ಧ ಬರೆಯಲು ಆಗುವುದಿಲ್ಲ. ಒಂದುವೇಳೆ ಬರೆದರೆ ಮಾನಹಾನಿ ಪ್ರಕರಣ ಎದುರಿಸಬೇಕಾಗುತ್ತದೆ. ಇಂತಹ ಹಲವು ಪ್ರಕರಣಗಳು ಜರುಗಿವೆ. ಇತ್ತೀಚಿನ ಇನ್ನೊಂದು ಬೆಳವಣಿಗೆಯೆಂದರೆ ಶಾಸಕಾಂಗದಿಂದ ಹಕ್ಕುಚ್ಯುತಿಯ ಬೆದರಿಕೆ. ಮಂತ್ರಿಯೊಬ್ಬರ ವಿರುದ್ಧ ಸಿಎಜಿ ನೀಡಿದ ವರದಿ ಆಧರಿಸಿ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟಿಸಿದ್ದಕ್ಕೆ ಹಕ್ಕುಚ್ಯುತಿ ನೋಟಿಸ್ ನೀಡಲಾಗಿತ್ತು. ಇದರ ವಿರುದ್ಧ ನಾವು ಪ್ರಬಲವಾಗಿ ಧ್ವನಿ ಎತ್ತಿದ್ದೇವು. ಮತ್ತೊಂದು ಪತ್ರಿಕೆಯವರು ಕ್ಷಮೆ ಕೇಳಿದ್ದರು. ಇಂತಹ ಘಟನೆಗಳು ಜರುಗಿದಾಗ ಪತ್ರಿಕೆಯ ಪರ ಯಾರೊಬ್ಬರು ಧ್ವನಿ ಎತ್ತುವುದಿಲ್ಲ. ಸಂವಿಧಾನದ ಕಲಂ ೧೯(೧) ವಿಮರ್ಶೆಯ ಅಧಿಕಾರವನ್ನು ಕೊಟ್ಟಿದೆ. ನಾಲ್ಕನೇ ಅಂಗ ಎಂದು ಗುರುತಿಸಿಕೊಂಡಿರುವ ನನ್ನ ಕ್ಷೇತ್ರ ಸಂವಿಧಾನದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದೆ’ ಎಂದರು.

‘ಮಾನಹಾನಿ ಪ್ರಕರಣ ಹಾಕುತ್ತಾರೆ ಎಂಬ ಹೆದರಿಕೆಯಲ್ಲೇ ನೀವು ಪತ್ರಿಕೆ ನಡೆಸುತ್ತೀರಾ?’ ಎಂಬ ಸಭಿಕರೊಬ್ಬರ ಪ್ರಶ್ನೆಗೆ, ‘ಪ್ರಜಾವಾಣಿ’ ಓದಿದರೆ ನಾವು ಹೇಗೆ ಪತ್ರಿಕೆ ನಡೆಸುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ’ ಎಂದು ಚುಟುಕಾಗಿ ಉತ್ತರಿಸಿದರು.

‘ಟಿಆರ್ಪಿತಿಯಿಂದಾಗಿ ಚಾನೆಲ್ಗಳು ಸುದ್ದಿಯನ್ನು ವೈಭವೀಕರಿಸುವ ಕೆಲಸ ಮಾಡುತ್ತಿವೆ. ಇದು ಹೋದರೆ ಎಲ್ಲವೂ ಸರಿಹೋಗಬಹುದೇನೊ ಎಂದು ಸಂಪಾದಕ ಮಿತ್ರರೊಬ್ಬರು ನನಗೆ ಹೇಳಿದ್ದರು’ ಎಂದು ನಟರಾಜ್ ಹುಳಿಯಾರ್ ಮಧ್ಯ ಪ್ರವೇಶಿಸಿ ಹೇಳಿದರು.

ಯಾವುದು ನಮ್ಮನ್ನು ನಿಯಂತ್ರಿಸುತ್ತಿವೆ...?: ‘ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳು ನಮ್ಮನ್ನು ಮುನ್ನಡೆಸುತ್ತಿವೆಯೊ ಅಥವಾ ಕೆಲ ಸ್ಥಾಪಿತ ಹಿತಾಸಕ್ತಿಗಳು ನಮ್ಮ ಆಲೋಚನೆಗಳನ್ನು ನಿಯಂತ್ರಿಸುತ್ತಿವೆಯೊ’ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಮಲ್ಲಿಕಾ ಘಂಟಿ ಅವರು ಪ್ರಶ್ನಿಸಿದರು.
‘ಭೈರಪ್ಪನವರು ಬರೆದ ‘ಆವರಣ’ ಕಾದಂಬರಿಯನ್ನು ಒಂದುವೇಳೆ ಶೂದ್ರರು ಬರೆದಿದ್ದರೆ ಇಡೀ ಕರ್ನಾಟಕ ಹೊತ್ತು ಉರಿಯುತ್ತಿತ್ತು. ಕಲಬುರ್ಗಿ ಅವರು ಬರೆದದ್ದಕ್ಕೆ ಅದೇ ಸಮುದಾಯದ ಸ್ಥಾಪಿತ ಹಿತಾಸಕ್ತಿಗಳಿಂದ ವಿರೋಧ ವ್ಯಕ್ತವಾಯಿತು. ಆದರೆ, ಪ್ರಗತಿಪರ ಲಿಂಗಾಯತರು ವಿರೋಧ ಮಾಡಲಿಲ್ಲ. ವಿರೋಧಿಸಿದವರೆಲ್ಲ ವೈದಿಕ ಮನಸ್ಸಿನ ಲಿಂಗಾಯತರು. ಶೂದ್ರರು ಬರೆದಾಗ ವಿರೋಧ ಉಂಟಾಗುತ್ತದೆ. ಅದನ್ನು ಯಾರು ವಿರೋಧಿಸುತ್ತಿದ್ದಾರೆ ಎಂಬುದು ಗೊತ್ತಿದ್ದರೂ ಹೇಳಲು ಸಾಧ್ಯವಾಗದಂತಹ ಅಸಹಾಯಕ ಸ್ಥಿತಿ ಇದೆ’ ಎಂದು ಅಳಲು ತೋಡಿಕೊಂಡರು.
ನಟರಾಜ ಹುಳಿಯಾರ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

‘ಮಾಜಿ ಸಚಿವೆಯರ ನಡವಳಿಕೆ ನಾಚಿಕೆಗೇಡು’
‘ಸಂಶೋಧಕ ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು...’ ಕೃತಿ ನಿಷೇಧಿಸಲು ಒತ್ತಾಯಿಸಿ ಬೆಂಗಳೂರಿನ ಪುರಭವನದ ಮುಂಭಾಗದಲ್ಲಿ ಬಸವ ಅನುಯಾಯಿಗಳು ಪ್ರತಿಭಟನೆ ನಡೆಸಿದ್ದರು. ಹಿಂದೆ ಸರ್ಕಾರದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದ ರಾಣಿ ಸತೀಶ್ ಮತ್ತು ಲೀಲಾದೇವಿ ಪ್ರಸಾದ್ ಅವರು, ಅಂದಿನ ಪ್ರತಿಭಟನೆಯಲ್ಲಿ ಆ ಪುಸ್ತಕದ ಪ್ರತಿಗಳನ್ನು ಸುಟ್ಟಿದ್ದು ಅತ್ಯಂತ ನಾಚಿಕೆಗೇಡಿನ ಸಂಗತಿ. ಆ ಘಟನೆ ನಿಜಕ್ಕೂ ನನ್ನಲ್ಲಿ ಅಸಹ್ಯ ಮೂಡಿಸಿತ್ತು. ಬಸವಣ್ಣ ಒಂದು ಹೇಳಿದರೆ ಇವರು ಮಾಡುವುದು ಬೇರೆ’ ಎಂದು ವಚನಗಳನ್ನು ಉದಾಹರಿಸಿ ಚಂಪಾ ಹರಿಹಾಯ್ದರು.

ಮಧ್ಯ ಪ್ರವೇಶಿಸಿದ ಸಿ.ಎನ್. ರಾಮಚಂದ್ರನ್ ಅವರು, ‘ಒಂದು ಸಮುದಾಯದ ಬಗ್ಗೆ ಚರ್ಚಿಸುವ ಬದಲು ವಿಶಾಲ ದೃಷ್ಟಿಕೋನದಲ್ಲಿ ಚರ್ಚೆ ನಡೆಸುವುದು ಒಳಿತು’ ಎಂದು ಸಲಹೆ ಮಾಡಿದರು.

ದಲಿತ ಮುಖಂಡನ ಹತ್ಯೆಗೆ ತೀವ್ರ ಖಂಡನೆ
ಗುಲ್ಬರ್ಗ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕನ್ಯಾಕೊಳ್ಳೂರ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಶುಭಾಶಯದ ಬ್ಯಾನರ್ ಹರಿದು ಹಾಕಿದ ನೆಪದಲ್ಲಿ ಶುಕ್ರವಾರ ದಲಿತ ಹಾಗೂ ಸವರ್ಣೀಯರ ಮಧ್ಯೆ ನಡೆದ ಗುಂಪು ಘರ್ಷಣೆಯಲ್ಲಿ ದಲಿತ ಮುಖಂಡ ದೇವಿಂದ್ರಪ್ಪ ಭೀಮಪ್ಪ ದಳಪತಿ ಅವರನ್ನು ಹತ್ಯೆ ಮಾಡಿರುವ ಘಟನೆಯನ್ನು ನಟರಾಜ್ ಹುಳಿಯಾರ್ ಖಂಡಿಸಿದರು.

‘ಮತೀಯವಾದ, ಜಾತಿವಾದದ ಹೆಸರಿನಲ್ಲಿ ದೊಡ್ಡ ದಬ್ಬಾಳಿಕೆ ನಡೆಸಲಾಗುತ್ತಿದ್ದು, ದಲಿತ ಮುಖಂಡನ ಕಗ್ಗೊಲೆಯೇ ಇದಕ್ಕೆ ತಾಜಾ ಉದಾಹರಣೆ’ ಎಂದು ಹುಳಿಯಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.