ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ಆಂಬುಲೆನ್ಸ್‌ಗೆ ಸಿದ್ದರಾಮಯ್ಯ ಚಾಲನೆ

Last Updated 15 ಏಪ್ರಿಲ್ 2015, 11:35 IST
ಅಕ್ಷರ ಗಾತ್ರ

ಬೆಂಗಳೂರು: ಅಪಘಾತದಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆಯನ್ನು ತಗ್ಗಿಸುವ ಮಹತ್ವದ ಬೈಕ್‌ ಆಂಬುಲೆನ್ಸ್‌ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡದಂಥ ನಗರಗಳಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದೇ ರೀತಿ ಜಿಲ್ಲಾ ಕೇಂದ್ರಗಳಲ್ಲಿಯೂ ಕಾರ್ಯನಿರ್ವಹಿಸಲಿವೆ. ಇದೊಂದು ಹೊಸ ಆರಂಭ’ ಎಂದು ನುಡಿದರು.
ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಸಂಚಾರ ದಟ್ಟನೆ ಸಮಸ್ಯೆ ಬೆಳೆಯುತ್ತಿದೆ. ಇದರಿಂದ ನಿಗದಿತ ಸಮಯದಲ್ಲಿ ಆಂಬುಲೆನ್ಸ್‌ಗಳು ಘಟನಾ ಸ್ಥಳಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಬೈಕ್‌ ಆಂಬುಲೆನ್ಸ್‌ಗಳು ಸೂಕ್ತ ಸಮಯಕ್ಕೆ ಘಟನಾ ಸ್ಥಳವನ್ನು ತಲುಪಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೈಕ್ ಆಂಬುಲೆನ್ಸ್ ಬಗ್ಗೆ ಒಂದಿಷ್ಟು....

* ಇದು 108 ಸೇವೆಯಡಿಯಲ್ಲಿಯೇ ಕಾರ್ಯನಿರ್ವಹಿಸಲಿದೆ
* ಒಂದು ಬೈಕ್‌ ಆಂಬುಲೆನ್ಸ್ ಬೆಲೆ 2 ಲಕ್ಷ ರೂಪಾಯಿ
*40 ಮಂದಿಯನ್ನು ತುರ್ತು ಚಿಕಿತ್ಸಾ ನಿಪುಣರನ್ನು ಸೇವೆ ಸಜ್ಜಾಗಿದ್ದಾರೆ
*ಅಗತ್ಯ ಔಷಧಿ, ಆಮ್ಲಜನಕ ಹೀಗೆ ವೈದ್ಯಕೀಯ ಸೌಲಭ್ಯ ಇರುತ್ತದೆ.
*ಈ ಆಂಬುಲೆನ್ಸ್‌ಗೆ ಮುಂದೆರಡು ಸೈರನ್‌ ದೀಪ, ಮೈಕ್‌ ಇರುತ್ತದೆ.
*ಕರೆ ಬಂದೊಡನೆ ಜಿಪಿಎಸ್‌ನಿಂದ ಘಟನಾ ಪ್ರದೇಶದ ಸಂಚಾರ ದಟ್ಟನೆ ಪರಿಶೀಲಿಸಿ ಈ ಸೇವೆ ಒದ 
ಸೇವೆ ಒದಗಿಸುಲಾಗುತ್ತದೆ
* ಆಂಬುಲೆನ್ಸ್ ಚಾಲಕರೇ ಚಿಕಿತ್ಸಕರೂ ಆಗಿರುತ್ತಾರೆ
* ಚಾಲಕರಿಗೆ ಗಾಢ ಬಣ್ಣದ ಜಾಕೇಟ್‌ ಧರಿಸುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT