ಮಡಿಕೇರಿ: ತಮ್ಮ ಅವಧಿಯಲ್ಲಿ ‘ವಿದ್ಯುತ್ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದರೆ ಸಿಬಿಐ ತನಿಖೆಗೆ ವಹಿಸಲಿ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಇಲ್ಲಿ ಬುಧವಾರ ಸವಾಲು ಹಾಕಿದರು.

‘ಬೆಳಗಾವಿ ಅಧಿವೇಶನದಲ್ಲಿ ವರದಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಅದೇ ಅಧಿವೇಶನದಲ್ಲಿ ತನಿಖೆಗೂ ಒಪ್ಪಿಸಲಿ. ಜತೆಗೆ, ಮಂಪರು ಪರೀಕ್ಷೆಯೂ ನಡೆದರೆ ಯಾರು ತಪ್ಪಿತಸ್ಥರೆಂಬುದು ಬೆಳಕಿಗೆ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ತೀರ್ಮಾನ ತೆಗೆದುಕೊಳ್ಳಲಿ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ನಾನು ಇಂಧನ ಸಚಿವೆಯಾಗಿದ್ದ ಅವಧಿಯಲ್ಲಿ 20 ವರ್ಷಕ್ಕೆ ವಿದ್ಯುತ್ ಖರೀದಿ ಮಾಡುವ ಕಡತವೊಂದು ಬಂದಿತ್ತು. ಇಷ್ಟು ದೀರ್ಘಾವಧಿ ಯೋಜನೆಗೆ ಒಪ್ಪಿಗೆ ನೀಡುವ ಅವಶ್ಯಕತೆ ಇರಲಿಲ್ಲ. ರಾಜ್ಯದಲ್ಲಿ ವಿದ್ಯುತ್ ಸ್ವಾವಲಂಬನೆ ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಆ ಪ್ರಸ್ತಾವ ತಿರಸ್ಕರಿಸಿದ್ದೆ. ಆದರೆ, ಜಿಂದಾಲ್‌ನಿಂದ ವಿದ್ಯುತ್ ಖರೀದಿ
ಸಲು ಒಪ್ಪಿಗೆ ನೀಡಿರಲಿಲ್ಲ ಎನ್ನುವ ಆರೋಪವನ್ನು ಇದೀಗ ಮಾಡಲಾಗುತ್ತಿದ್ದು, ಅದು ಸುಳ್ಳು’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.