ಚಿಕ್ಕಬಳ್ಳಾಪುರ: ನಮಸ್ಕಾರ, ಉಭಯ ಕುಶಲೋಪರಿ ಸಾಂಪ್ರತ, ನಾವು ಇಲ್ಲಿ ಕ್ಷೇಮವಾಗಿದ್ದೇವೆ. ಅಲ್ಲಿ ನೀವು ಕೂಡ ಕ್ಷೇಮದಿಂದ ಇರುವಿರೆಂದು ನಾನು ಭಾವಿಸಿರುತ್ತೇನೆ.

ಈ ಪತ್ರ ಬರೆಯಲು ಕಾರಣವೆನೆಂದರೆ ನಮ್ಮ ‘ಜಯಾ’ ಉತ್ತಮವಾಗಿ ಅಭಿನಯಿಸುತ್ತಿದ್ದಾಳೆ. ಅವಳಿಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಆಸೆ ಇದೆ. ಹಾಗಾಗಿ ನೀವು ಇತ್ತ ಕಡೆ (ಮದ್ರಾಸ್) ಬಂದಾಗ ಮನೆಗೆ ಬಂದು ಅವಳ ಒಳ್ಳೊಳ್ಳೆ ಚಿತ್ರಗಳನ್ನು ತೆಗೆದು, ಪೋತ್ಸಾಹ ಕೊಡಿ. ಮದ್ರಾಸ್‌ಗೆ ಬಂದಾಗ ಮರೆಯದೇ ಮನೆಗೆ ಬನ್ನಿ. ಬೆಳೆಯುವ ಹುಡುಗಿಗೆ ನಿಮ್ಮ ಆಶೀರ್ವಾದವಿರಲಿ.
ಇಂತಿ ನಿಮ್ಮ ವಿಶ್ವಾಸಿ
ಸಂಧ್ಯಾ

ಸುಮಾರು 50 ವರ್ಷಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ತಾಯಿ ಸಂಧ್ಯಾ ಅವರು ಕನ್ನಡ ಚಿತ್ರರಂಗದ ಹಿರಿಯ ಸ್ಥಿರ ಛಾಯಾಗ್ರಾಹಕ ಭವಾನಿ ಲಕ್ಷ್ಮೀ ನಾರಾಯಣ್ ಅವರಿಗೆ ಬರೆದ ಪತ್ರದ ಸಾರಾಂಶವಿದು.

ನಟಿ, ಉತ್ತಮ ನೃತ್ಯಪಟು ಕೂಡ ಆಗಿದ್ದ ಸಂಧ್ಯಾ ಅವರು ತಮ್ಮ ಮಗಳು ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಲಿ ಎನ್ನುವ ಆಸೆ ಹೊತ್ತು ಬರೆದ ಪತ್ರವನ್ನು ಲಕ್ಷ್ಮೀ ನಾರಾಯಣ್ ಅವರು ಇಂದಿಗೂ ಜತನದಿಂದ ಕಾಪಿಟ್ಟುಕೊಂಡಿದ್ದಾರೆ.

ಸಂಧ್ಯಾ ಅವರ ಆಹ್ವಾನ ಮನ್ನಿಸಿದ ಲಕ್ಷ್ಮೀ ನಾರಾಯಣ್ ಅವರು ಚೆನ್ನೈನ (ಮದ್ರಾಸ್) ಟಿ.ನಗರದ ಮುಖ್ಯರಸ್ತೆ ಯಲ್ಲಿದ್ದ ಸಂಧ್ಯಾ ಅವರ ಮನೆಗೆ ನಾಲ್ಕು ಬಾರಿ ಹೋಗಿ ಯುವ ನಟಿ ಜಯಲಲಿತಾ ಅವರ ವಿವಿಧ ಭಂಗಿಯ ಅನೇಕ ಚಿತ್ರಗಳನ್ನು ಸೆರೆಹಿಡಿದು ತಂದಿದ್ದರು. ಅವು ವಾರಪ ತ್ರಿಕೆಗಳಾದ ಸುಧಾ, ಗೋಕುಲ, ಜನಪ್ರಗತಿಯಲ್ಲಿ ಪ್ರಕಟವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.