ಆರೋಪಿಗಳು ವಿವಿಧ ಜೈಲುಗಳು, ಸರ್ಕಾರಿ ಕಚೇರಿಗಳು, ‘ದಿನಮಲರ್’ ಪತ್ರಿಕಾ ಕಚೇರಿ, ‘ಫ್ರೆಂಚ್ ಕಾನ್ಸುಲೆಟ್’ಗೂ ಬೆದರಿಕೆ ಪತ್ರಗಳನ್ನು ಕಳುಹಿಸಿದ್ದರು. ಅಲ್ಲದೇ, ದಕ್ಷಿಣ ಭಾರತದ ಐದು ವಿವಿಧ ನ್ಯಾಯಾಲಯಗಳ ಆವರಣದಲ್ಲಿ ಬಾಂಬ್ ಸ್ಫೋಟಿಸುವುದಾಗಿಯೂ ತಿಳಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.