ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಆಯ್ಕೆಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 18 ಮಂದಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.ನಾಮಪತ್ರಗಳ ಪರಿಶೀಲನೆ ಸೋಮವಾರ ನಡೆಯಿತು.

ನಂತರ ಚಿಹ್ನೆ ಹಂಚುವ ಪ್ರಕ್ರಿಯೆ ನಡೆಯಿತು. ಕ್ರಿಮಿನಲ್ ಮೊಕದ್ದಮೆ ಇದೆ ಎನ್ನುವ ಕಾರಣಕ್ಕೆ ಕೆಲವರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಡಿ.ಕೆ.ಶಿವಕುಮಾರ್ ಬೆಂಬಲಿತ ಬಿ.ವಿ.ಶ್ರೀನಿವಾಸ್ (ರಾಜಾಜಿನಗರ), ಶಾಸಕ ಕೃಷ್ಣ ಬೈರೇಗೌಡ ಬೆಂಬಲಿತ ರಿಜ್ವಾನ್ (ಮೈಸೂರು), ಎ.ಪಿ.ಬಸವರಾಜು (ಹಾಸನ), ಕೋಲಾರದ ಕಾರ್ತಿಕ್ ಮತ್ತು ಅಕ್ರಂ, ಮೈಸೂರಿನ ಪ್ರದೀಪ್ ಗೌಡ, ಕರೋಲಿನ್, ಬಿಬಿಎಂಪಿ ಸದಸ್ಯರಾದ ಲೋಕೇಶ್ ನಾಯಕ್, ಶಶಿ ಸೇರಿದಂತೆ ಹಲವು ಪ್ರಮುಖರು ಕಣದಲ್ಲಿದ್ದಾರೆ.

ಇವರಲ್ಲಿ ಅತಿ ಹೆಚ್ಚು ಮತ ಪಡೆದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು. ನಂತರದ ಸ್ಥಾನ ಪಡೆದವರು ಸಮಿತಿಯ ಇತರ ಪದಾಧಿಕಾರಿಗಳಾಗಿ ನೇಮಕಗೊಳ್ಳಲಿದ್ದಾರೆ.ಅಕ್ಟೋಬರ್ 12 ಮತ್ತು 13ರಂದು ಚುನಾವಣೆ ನಡೆಯಲಿದೆ.

ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕಗಳಿಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಇದೇ ದಿನಾಂಕಗಳಂದು ಚುನಾವಣೆ ನಡೆಯಲಿದೆ. ಈ ಘಟಕಗಳ ಮತ ಎಣಿಕೆ ಅ.13ರ ಸಂಜೆ ನಡೆಯಲಿದೆ. ಯುವ ಕಾಂಗ್ರೆಸ್ ಪದಾಧಿಕಾರಿಗಳ ಮತ ಎಣಿಕೆ 15ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.