ವಿಜಾಪುರ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಕೊರೆಯುತ್ತಿರುವ ಚಳಿ ಮುಂದುವರಿದಿದ್ದು, ಭಾನುವಾರ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ವರ್ಷ ದಾಖಲಾದ ಅತಿ ಕಡಿಮೆ ತಾಪಮಾನ ಇದು.
ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ದಾಖಲಾಗುವುದು ಸಾಮಾನ್ಯವಾಗಿದೆ. ಆದರೆ, ಎರಡು ದಿನಗಳ ಕಾಲ ಹಗಲು–ರಾತ್ರಿ ಚಳಿ ಇರುವುದು ಇದೇ ಮೊದಲು ಎಂದು ಜನ ಹೇಳುತ್ತಿದ್ದಾರೆ.