ಬೀದರ್: ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿಯಲ್ಲಿರುವ ಕಾರಂಜಾ ಯೋಜನೆಯ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಶಾಸಕರೊಂದಿಗೆ ಮಾತಿನ ಚಕಮಕಿ ನಡೆಸಿದ ಅಧಿಕಾರಿಯನ್ನು ಸಭೆಯಿಂದ ಹೊರ ಕಳುಹಿಸಿದ ಪ್ರಸಂಗ ನಡೆಯಿತು.

ಶಾಸಕ ಈಶ್ವರ ಖಂಡ್ರೆ ‘ವಿಶೇಷ ಭೂಸ್ವಾಧೀನಾಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೆಲಸ ಮಾಡುವುದಾದರೆ ಇರಬೇಕು. ಇಲ್ಲವಾದರೆ ಹೋಗಬೇಕು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ಭೂ ಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ, ‘ತುಂಬಿದ ಸಭೆಯಲ್ಲಿ ಆಧಾರವೇ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ. ನನ್ನಿಂದ ಏನಾದರೂ ತಪ್ಪಿದ್ದರೆ ನಿರ್ದಿಷ್ಟವಾಗಿ ಹೇಳಿ. ಅದಕ್ಕೆ ಕ್ರಮ ಕೈಗೊಳ್ಳಲಿ. ಸುಮ್ಮನೆ ಆರೋಪ ಮಾಡಬೇಡಿ’ ಎಂದು ತಕರಾರು ತೆಗೆದರು.

ಶಾಸಕ ಈಶ್ವರ ಖಂಡ್ರೆ , ‘ಷಟ್ ಅಪ್’ ಎಂದ ಏರು ದನಿಯಲ್ಲಿ ಪ್ರತಿಕ್ರಿಯಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಸಚಿವೆ ಉಮಾಶ್ರೀ ಹಾಗೂ ಸಂಸದ ಧರ್ಮಸಿಂಗ್ ಅವರೂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಧರ್ಮಸಿಂಗ್ ಎದ್ದು ನಿಂತು ಅಧಿಕಾರಿಯತ್ತ ಕೈತೋರಿಸುತ್ತಾ, ‘ಹೇಯ್.. ಏನು ಮಾತಾಡ್ತಿಯೋ. ಸುಮ್ಮನೇ ಕೂಡು’ ಎಂದು ಸೂಚಿಸಿದರೆ, ಉಮಾಶ್ರೀ ಅವರು,‘ಸುಮ್ಮನೇ ಕೂರಿ. ಜನಪ್ರತಿನಿಧಿ ಉದ್ದೇಶಿಸಿ ಹೀಗೇ ಮಾತನಾಡುವುದು ಸರಿಯಲ್ಲ. ಶಾಸಕರು ನಿಮ್ಮ ವಿರುದ್ಧ ಆರೋಪ ಮಾಡಿಲ್ಲ. ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರತ್ತ ತಿರುಗಿದ ಸಚಿವೆ ಉಮಾಶ್ರೀ, ‘ಡಿಸಿಯವರೇ ಇದು ಸರಿಯಾದ ಕ್ರಮವಲ್ಲ. ನಾನು ನಿರ್ದೇಶನ ನೀಡುತ್ತಿದ್ದೇನೆ. ಇವರ ವಿರುದ್ಧ ಕ್ರಮ ಜರುಗಿಸಿ. ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳು ಹೀಗೆ ಮಾತನಾಡುವುದು ಸರಿಯಲ್ಲ. ಅವರ ಮೇಲಾ-ಧಿಕಾರಿಗಳಿಗೆ ಅಧಿಕಾರಿಯ ವರ್ತನೆ ಕುರಿತು ಪತ್ರ ಬರೆಯಿರಿ. ಏನು ಉತ್ತರ ಕೊಡುತ್ತಾರೋ ಅವರಲ್ಲಿಯೇ ಕೊಡಲಿ’ ಎಂದು ಉಮಾಶ್ರೀ ಸೂಚಿಸಿದರು.

ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಈಶ್ವರ ಖಂಡ್ರೆ ‘ಅಧಿಕಾರಿಯನ್ನು ಸಭೆಯಿಂದ ಹೊರಗೆ ಕಳುಹಿಸಬೇಕು’ ಎಂದು ಆಗ್ರಹಿಸಿದರು. ಉಮಾಶ್ರೀ ಇದಕ್ಕೆ ಸ್ಪಂದಿಸಿ, ಸಭೆಯಿಂದ ಹೊರ ನಡೆಯುವಂತೆ ಅಧಿಕಾರಿಗೆ ಸೂಚಿಸಿದರು.

ಕಾರ್ಯಕರ್ತರ ದಬ್ಬಾಳಿಕೆ: ಸಭೆಯಿಂದ ಹೊರಬಂದ ಅಧಿಕಾರಿ ಮಲ್ಲಿಕಾರ್ಜುನ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಈ ಸ್ಥಾನಕ್ಕೆ ಬಂದು ನಾಲ್ಕು ತಿಂಗಳಷ್ಟೇ ಆಗಿದೆ. ನನ್ನಿಂದ ಏನು ಲೋಪವಾಗಿದೆ ? ತಪ್ಪಾಗಿದ್ದರೆ ಕ್ರಮ ಜರುಗಿಸಲಿ’ ಎಂದು ಹೇಳಿದರು.

ಶಾಸಕರ ಬೆಂಬಲಿಗರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಂದು ಕೆಲ ಮಾಹಿತಿ ಕೇಳಿದರು. ಕಾನೂನು ಮಿತಿಯಲ್ಲಿ ನಾನು ನೀಡಿದ್ದು, ಇದನ್ನು ಶಾಸಕರ ಗಮನಕ್ಕೂ ತಂದಿದ್ದೇನೆ. ಅವರ ಮಾತುಗಳಿಗೆ ಸ್ಪಂದಿಸಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಕ್ರಮ ಜರುಗಿಸಲಿ. ಉತ್ತರ ನೀಡುತ್ತೇನೆ ಎಂದು ಹೇಳಿದರು. ಸುಮಾರು 20 ನಿಮಿಷ ಮಾತಿನ ಚಕಮಕಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.