ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷ. ಶೆಟ್ಟರ್ ಸೇರಿ ಐವರಿಗೆ ಅಕಾಡೆಮಿ ಗೌರವ

ಕರ್ನಾಟಕ ಸಾಹಿತ್ಯ ಅಕಾಡೆಮಿ: 2014ನೇ ಸಾಲಿನ ಪ್ರಶಸ್ತಿ ಪ್ರಕಟ
Last Updated 29 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್‌, ಚಿಂತಕ ಡಾ.ಜಿ. ರಾಮಕೃಷ್ಣ, ಕವಿಗಳಾದ ಸುಬ್ರಾಯ ಚೊಕ್ಕಾಡಿ,  ಪ್ರೊ.ಸುಕನ್ಯಾ, ಸವಿತಾ ನಾಗಭೂಷಣ ಅವರು 2014ರ ಸಾಲಿನ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹10ಸಾವಿರ ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್‌ 29ರಂದು ಧಾರವಾಡದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

2013ರ ಸಾಲಿನ ಪುಸ್ತಕ ಬಹುಮಾನಕ್ಕೆ ಹದಿನಾರು ಕೃತಿಗಳು ಆಯ್ಕೆಯಾಗಿವೆ. ತಲಾ ₹5 ಸಾವಿರ ನಗದು ಒಳಗೊಂಡಿದೆ.

ಕೃತಿಗಳ ವಿವರ:

ಕಾವ್ಯ:  ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ (ಸುಬ್ಬು ಹೊಲೆಯಾರ್).
ಕಾದಂಬರಿ: ಆತ್ಮವೃತ್ತಾಂತ (ರಜನಿ ನರಹಳ್ಳಿ).
ಸಣ್ಣಕತೆ: ಸಲ್ಮಾನ್‌ಖಾನನ ಡಿಫಿಕಲ್ಟೀಸು (ಎಂ.ಎಸ್‌.ಶ್ರೀರಾಮ್‌).
ನಾಟಕ: ಅನಭಿಜ್ಞ ಶಾಕುಂತಲ (ಕೆ.ವೈ.ನಾರಾಯಣಸ್ವಾಮಿ).
ಲಲಿತ ಪ್ರಬಂಧ: ಮಹಾಮಾತೆ ಮಲ್ಲಕ್ಕ ಮತ್ತು ಇತರ ಪ್ರಬಂಧಗಳು (ಎಂ.ಡಿ.ಗೋಗೇರಿ).

ಪ್ರವಾಸ ಸಾಹಿತ್ಯ: ಅಂಡಮಾನ್‌ ಕಂಡ ಹಾಗೆ (ಡಾ.ಎಚ್‌.ಎಸ್‌. ಅನುಪಮಾ).
ಆತ್ಮಕತೆ: ಅಲೆಮಾರಿಯ ಅಂತರಂಗ(ಕುಪ್ಪೆ ನಾಗರಾಜ).
ಸಾಹಿತ್ಯ ವಿಮರ್ಶೆ: ಕವಿತೆಯ ಓದು (ಪ್ರಭಾಕರ ಆಚಾರ್ಯ).
ಮಕ್ಕಳ ಸಾಹಿತ್ಯ: ಹಾರದಿರಲಿ ಪ್ರಾಣಪಕ್ಷಿ (ಹ.ಸ. ಬ್ಯಾಕೋಡ).
ವಿಜ್ಞಾನ ಸಾಹಿತ್ಯ: ಕಾಡು ಕಲಿಸುವ ಪಾಠ (ಟಿ.ಎಸ್‌.ಗೊರವರ)
ಮಾನವಿಕ: ಎಂದೂ ಮುಗಿಯದ ಯುದ್ಧ (ಎನ್‌. ಜಗದೀಶ್‌ ಕೊಪ್ಪ).

ಸಂಶೋಧನೆ: ಮೈಯೇ ಸೂರು ಮನವೇ ಮಾತು (ಡಾ.ಬಸವರಾಜ ಕಲ್ಗುಡಿ).
ಅನುವಾದ (ಸೃಜನಶೀಲ): ಬೇಗುದಿ (ಆರ್‌.ಲಕ್ಷ್ಮೀನಾರಾಯಣ).
ಅನುವಾದ (ಸೃಜನೇತರ): ತೆಲಂಗಾಣ ಹೋರಾಟ (ಬಿ. ಸುಜ್ಞಾನ ಮೂರ್ತಿ).
ಸಂಕೀರ್ಣ: ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ (ಲಕ್ಷ್ಮೀಶ ತೋಳ್ಪಾಡಿ).
ಲೇಖಕರ ಮೊದಲ ಕೃತಿ: ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ (ಶ್ರುತಿ ಬಿ.ಎಸ್್‌).
2013ರ ಸಾಲಿನ ದತ್ತಿನಿಧಿ ಬಹುಮಾನ: ಚದುರಂಗ ದತ್ತಿನಿಧಿ: ಅನಾವರಣ (ಕಾದಂಬರಿ) ಡಾ.ಸಿ.ಆರ್‌. ಪಾರ್ಥ ಸಾರಥಿ.
ಸಿಂಪಿ ಲಿಂಗಣ್ಣ ದತ್ತಿನಿಧಿ:  ನೆಲದೊಡಲ ಚಿಗುರು ಡಾ.ಎಲ್‌. ನಾರಾಯಣ ರೆಡ್ಡಿ (ಜೀವನ ಚರಿತ್ರೆ) ಎನ್‌.ಎಲ್‌. ಆನಂದ್‌/ ಗುಂಡಪ್ಪ ದೇವಿಕೇರಿ.

ಪಿ.ಶ್ರೀನಿವಾಸರಾವ್‌ ದತ್ತಿ: ಸಾಹಿತ್ಯ ಸಿಂಚನ (ವಿಮರ್ಶೆ) ಡಾ.ಬಸವರಾಜ ಸಬರದ.
ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ: ಕುರಿಂಜಿ ಜೇನು (ಅನುವಾದ) ಡಾ.ಅಶೋಕ್‌ ಕುಮಾರ್‌.
ಮಧುರಚೆನ್ನ ದತ್ತಿನಿಧಿ: ಅಮೃತಕ್ಕೆ ಹಾರಿದ ಗರುಡ (ಮೊದಲ ಸ್ವತಂತ್ರ ಕೃತಿ) ಪ್ರೊ.ರಮೇಶ ಮ.ಕಲ್ಲನಗೌಡರ.
ಅಮೆರಿಕನ್ನಡ ದತ್ತಿನಿಧಿ: ಹಂಟ್‌ ಬ್ಯಾಂಗಲ್ ಕಮಿಲಿಯನ್ (ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ) ದೀಪಾ ನಾಗೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT