ಸುವರ್ಣಸೌಧ (ಬೆಳಗಾವಿ): ಹಿಂದು ಳಿದ ವರ್ಗಗಳ ಸಮುದಾಯ ಭವನ ನಿರ್ಮಾಣಕ್ಕೆ ಜಿಲ್ಲಾ ಮಟ್ಟದಲ್ಲಿ ₨ 1 ಕೋಟಿ ಮತ್ತು ತಾಲ್ಲೂಕು ಮಟ್ಟದಲ್ಲಿ ₨ 50 ಲಕ್ಷ ಅನುದಾನ ನೀಡಲು ಸರ್ಕಾರ ಸಿದ್ಧ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಸೋಮವಾರ ವಿಧಾನ ಪರಿಷತ್‌ನಲ್ಲಿ ಪ್ರಕಟಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಇದಕ್ಕೂ ಮುನ್ನ ಮಾತನಾಡಿದ ಪುಟ್ಟ ಸ್ವಾಮಿ, ‘ಹಿಂದುಳಿದ ವರ್ಗಗಳಿಗೆ ಸಮು ದಾಯ ಭವನ ನಿರ್ಮಾಣಕ್ಕೆ ಕೇವಲ ₨ 5 ಲಕ್ಷ ಅನುದಾನ ನೀಡಲಾಗುತ್ತಿದೆ. ಆದರೆ, ಮುಸ್ಲಿಂ ಸಮುದಾಯದವರಿಗೆ ಶಾದಿ ಮಹಲ್ ನಿರ್ಮಾಣಕ್ಕೆ ತಾಲ್ಲೂ ಕುಮಟ್ಟದಲ್ಲಿ ₨ 50 ಲಕ್ಷದವ ರೆಗೆ ಮತ್ತು ಜಿಲ್ಲಾಮಟ್ಟದಲ್ಲಿ ₨ 1 ಕೋಟಿವ ರೆಗೆ ಅನುದಾನ ನೀಡಲಾಗುತ್ತಿದೆ. ಈ ವಿಷಯದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ’ ಎಂದು ಆರೋಪಿಸಿದರು.

ತಕ್ಷಣ ಪ್ರತಿಕ್ರಿಯಿಸಿದ ಆಂಜನೇಯ, ‘ನಮ್ಮ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಎಲ್ಲ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ನೀಡುತ್ತಿದೆ. ನಿವೇಶನ ಹೊಂದಿರುವ ಮತ್ತು ಅನುದಾನ ಮಂಜೂರಾತಿಗೆ ಅಗತ್ಯ ಅರ್ಹತೆ ಹೊಂದಿರುವ ಸಂಸ್ಥೆಗಳಿಂದ ಅರ್ಜಿ ಬಂದಲ್ಲಿ ಸಕಾರಾತ್ಮಕ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು. ಮಠಗಳಿಗೂ ಅನುದಾನ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಠಗಳಿಗೆ ಅನುದಾನ ನೀಡುತ್ತಿಲ್ಲ ಎಂಬ ಅಪ ಪ್ರಚಾರ ನಡೆದಿದೆ. ಅದು ಸರಿಯಲ್ಲ, ನಮ್ಮ ಸರ್ಕಾರ ಕೂಡ ಮಠಗಳಿಗೆ ನೆರವು ನೀಡುತ್ತಿದೆ.

ಆದರೆ, ನಿಮ್ಮ ಸರ್ಕಾರದ ರೀತಿ ಮನಸ್ಸಿಗೆ ಬಂದಂತೆ ಹಂಚುವುದಿಲ್ಲ’ ಎಂದು ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು. ‘ನಾವು ಉಳ್ಳವರಿಗೆ ಹಣ ಕೊಡುವು ದಿಲ್ಲ. ಇಲ್ಲದವರಿಗೆ ನೆರವು ನೀಡುತ್ತೇವೆ. ಅದರಲ್ಲೂ ಅವರ ಯೋಜನೆಗಳ ಸ್ವರೂಪ, ಅವರಿಗೆ ಇರುವ ಬದ್ಧತೆ ಆಧರಿಸಿ ಅನುದಾನ ಕೊಡುತ್ತೇವೆ’ ಎಂದರು.

ಹಿಂದಿನ ಆರ್ಥಿಕ ವರ್ಷಗಳಲ್ಲಿ ವಿವಿಧ ಸಮುದಾಯಗಳ ಸಂಘ–ಸಂಸ್ಥೆಗಳಿಗೆ ಮಂಜೂರು ಮಾಡಿದ್ದ ಅನುದಾನದ ಮೊತ್ತವನ್ನು ಸರ್ಕಾರಕ್ಕೆ ವಾಪಸು ಕಳಿಸಬಾರದು ಎಂದು ಜಿಲ್ಲಾಧಿಕಾರಿ ಗಳಿಗೆ ನಿರ್ದೇಶನ ನೀಡಲಾಗಿದೆ. ಕಾರ ಣಾಂತರಗಳಿಂದ ಯೋಜನೆ ಅನುಷ್ಠಾನ ವಿಳಂಬ ಆಗಿರಬಹುದು. ಅದನ್ನೆಲ್ಲ ಪರಿ ಗಣಿಸದೇ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ. ಹಣ ವಾಪಸು ಕಳುಹಿಸುವ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.