ಚಿಕ್ಕಬಳ್ಳಾಪುರ: ಜಿಲ್ಲೆಯ ಸಮಗ್ರ ಬರ ಪರಿಸ್ಥಿತಿ ವೀಕ್ಷಣೆಗೆ ಸೋಮವಾರ ಆಗಮಿಸಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ತಾಲ್ಲೂಕಿನ ಐದಾರು ಗ್ರಾಮಗಳಿಗೆ ಮಾತ್ರವೇ ಭೇಟಿ ನೀಡಿ ನಿರ್ಗಮಿಸಿದ್ದು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿತು.

ಒಂದೊಂದು ಗ್ರಾಮದಲ್ಲಿ ಎರಡು-ಮೂರು ನಿಮಿಷಗಳಷ್ಟು ಮಾತ್ರವೇ ಸಮಸ್ಯೆಗಳನ್ನು ಆಲಿಸಿ, ಮುಂದಿನ ಗ್ರಾಮಕ್ಕೆ ತೆರಳುತ್ತ್ದ್ದಿದುದು ಗ್ರಾಮಸ್ಥರ ಅಸಮಾಧಾನಕ್ಕೂ ಕಾರಣವಾಯಿತು.

`ಜಿಲ್ಲೆಗೆ ಬರುವ ಮುಖ್ಯಮಂತ್ರಿಗಳು ನಮ್ಮ ಗ್ರಾಮಕ್ಕೂ ಬರುತ್ತಾರೆ. ಸಮಸ್ಯೆಗಳನ್ನು ಪರಿಹರಿಸುತ್ತಾರೆ~ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಬಹುತೇಕ ಗ್ರಾಮಸ್ಥರು ನಿರಾಸೆಗೊಳಗಾದರು.

ಗ್ರಾಮದ ಪ್ರವೇಶದ್ವಾರಗಳಲ್ಲಿ ಗುಂಪಾಗಿ ನಿಂತು ಬೇಡಿಕೆಗಳ ಮನವಿಪತ್ರ ಸಲ್ಲಿಸಲು ಕಾತರರಾಗಿದ್ದರು. `ಸಾಹೇಬ್ರು ನಮ್ಮ ಹಳ್ಳೀಗೆ ಬರಲೇ ಇಲ್ಲ. ನಾವೆಲ್ಲ ಬೆಳಿಗ್ಗೆಯಿಂದಲೇ ಕಾಯ್ದುಕೊಂಡು ಕೂತಿದ್ದೆವು. ನಾವು ಮನವಿಪತ್ರ ಕೊಡ್ತೀವಿ ಅಂತ ಅವರು ಬೇರೆ ಮಾರ್ಗದಲ್ಲಿ ಹೋಗಿಬಿಟ್ಟರು~ ಎಂದು ಗ್ರಾಮದ ಹಿರಿಯರು ದೂರಿದರು.

ತಾಲ್ಲೂಕಿನ ನಾಯನಹಳ್ಳಿ, ಅಜ್ಜವಾರ, ಕಡಿಶೀಗೇನಹಳ್ಳಿ, ದಿಬ್ಬೂರು ಸೇರಿದಂತೆ ಇತರ ಗ್ರಾಮಗಳ ಜನರು ಬೆಳಿಗ್ಗೆಯಿಂದಲೇ ಮುಖ್ಯಮಂತ್ರಿ ಆಗಮನ ನಿರೀಕ್ಷಿಸುತ್ತಿದ್ದರು. ಯುವಕರು ಹಾರತುರಾಯಿ ಇಟ್ಟುಕೊಂಡು ಸಿದ್ಧರಾಗಿದ್ದರೆ, ಮಹಿಳೆಯರು ಆರತಿ ತಟ್ಟೆಗಳನ್ನು ಹಿಡಿದುಕೊಂಡಿದ್ದರು. ನೀರಿನ ಸಮಸ್ಯೆಯ ಗಂಭೀರತೆ ತಿಳಿಪಡಿಸಲೆಂದೇ ನಾಯನಹಳ್ಳಿ ಗ್ರಾಮಸ್ಥರು ರಸ್ತೆ ಮಧ್ಯೆಯೇ ಖಾಲಿ ಕೊಡ, ಬಕೆಟ್ಗಳನ್ನು ಹಿಡಿದುಕೊಂಡು ನಿಂತಿದ್ದರು. ನೀರಿನ ಸಮಸ್ಯೆ ಪರಿಹರಿಸಿ ಎಂದು ಗ್ರಾಮಸ್ಥರು ಮನವಿ ಮಾಡಲು ಬಯಸಿದ್ದರು.

`ಮುಖ್ಯಮಂತ್ರಿ ನಾಯನಹಳ್ಳಿ ಗ್ರಾಮದ ಮೂಲಕವೇ ಹಾಯ್ದು ಬೇರೆ ಗ್ರಾಮಕ್ಕೆ ಹೋಗುತ್ತಾರೆ ಎಂದು ಭಾವಿಸಿದ್ದೆವು. ನೀರಿನ ಸಮಸ್ಯೆ ತಿಳಿಸಲೆಂದೇ ಖಾಲಿ ಕೊಡ, ಬಕೆಟ್ಗಳನ್ನು ಹಿಡಿದು ನಿಂತಿದ್ದೆವು. ನಾವು ಹಾಗೆ ನಿಂತಿರುವುದು ಅರಿತು ಬೇರೆ ಮಾರ್ಗದಲ್ಲಿ ಪ್ರಯಾಣ ಬೆಳೆಸಿದರೆ ಅಥವಾ ಬೇರೆ ಕಾರಣವಿದೆಯೇ ಎಂಬುದು ನಮಗೆ ಗೊತ್ತಾಗಲಿಲ್ಲ. ನಮ್ಮ ರಾಜ್ಯದ ಮುಖ್ಯಸ್ಥರು ನಮ್ಮ ಗ್ರಾಮಕ್ಕೆ ಬಾರದಿರುವುದು ಬೇಸರ ಮೂಡಿಸಿತು~ ಎಂದು ಗ್ರಾಮಸ್ಥ ರಮೇಶ್ ತಿಳಿಸಿದರು.

`ಬರ ಪರಿಸ್ಥಿತಿ ಅಧ್ಯಯನಕ್ಕೆ ಬಂದ ಮುಖ್ಯಮಂತ್ರಿಯವರು ರಸ್ತೆ ಬದಿಯಲ್ಲಿ ನಿಂತವರ ಜೊತೆ ಕೆಲವೇ ನಿಮಿಷಗಳವರೆಗೆ ಮಾತನಾಡಿ, ತಮ್ಮ ಪ್ರಯಾಣ ಮುಂದುವರಿಸಿದರು. ಬರಕ್ಕೆ ತುತ್ತಾಗಿರುವ ಇತರ ಬಹುತೇಕ ಗ್ರಾಮಗಳಿಗಾಗಲಿ ಅಥವಾ ಹೊಲಗದ್ದೆಗಳಿಗಾಗಲಿ ಭೇಟಿ ನೀಡಲೇ ಇಲ್ಲ. ಬತ್ತಿರುವ ಕೆರೆ ಪ್ರದೇಶಗಳಿಗೆ ಮತ್ತು ಒಣಗಿಹೋದ ತೋಟದ ಜಮೀನುಗಳತ್ತ ಅವರು ಕಣ್ಣು ಹಾಯಿಸಲಿಲ್ಲ. ಅವುಗಳತ್ತ ಭೇಟಿ ನೀಡಿ, ರೈತರ ಸಂಕಷ್ಟಗಳನ್ನು ಆಲಿಸಲಿಲ್ಲ~ ಎಂದು ರೈತ ವೆಂಕಟಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.