ಬೆಂಗಳೂರು: ಪ್ರಸ್ತುತ ರಾಜಕೀಯ ಗೊಂದಲ ನಡುವೆಯು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮ್ಮ ಚೊಚ್ಚಲ ಹಾಗೂ ಬಿಜೆಪಿ ಸರ್ಕಾರದ ಕೊನೆಯ 2013-14ನೇ ಸಾಲಿನ ರಾಜ್ಯ ಬಜೆಟ್ನ್ನು ಶುಕ್ರವಾರ ಮಂಡಿಸಿದರು. ಹಣಕಾಸು ಸಚಿವರೂ ಸಹ ಆಗಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಧ್ಯಾಹ್ನ 12.30ಕ್ಕೆ ಸರಿಯಾಗಿ ಮೊದಲು ಕೃಷಿ ಮುಂಗಡಪತ್ರವನ್ನು ಮಂಡಿಸಿದರು.

2013-14ನೇ ಸಾಲಿನ ಬಜೆಟ್ನ ಮುಖ್ಯಾಂಶಗಳು

* 2013-14ನೇ ಸಾಲಿನ ಬಜೆಟ್ ಗಾತ್ರವು ಒಟ್ಟು ರೂ. 1ಲಕ್ಷದ 17 ಸಾವಿರ ಕೋಟಿ. ಇದರಲ್ಲಿ ರೂ. 22.310 ಕೋಟಿ ಕೃಷಿ ಬಜೆಟ್ನ್ನು ಒಳಗೊಂಡಿದೆ.
* ಯೋಜನಾ ಗಾತ್ರ ರೂ. 42 ಸಾವಿರ ಕೋಟಿ. ಕಳೆದ ವರ್ಷದ ಬಜೆಟ್ಗಿಂತ ಶೇ 10ರಷ್ಟು ಹೆಚ್ಚಳ.
* ಕೃಷಿ ಬಜೆಟ್ಗೆ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸದನದಲ್ಲಿ ಶ್ಲಾಘನೆ.
* ವಾಡಿಕೆಗಿಂತ ಈ ಬಾರಿ ಶೇ 22ರಷ್ಟು ಮಳೆ ಕಡಿಮೆ ಬಿದ್ದಿದ್ದು, ಆದರೂ ಕೆಲವೆಡೆ ಉತ್ತಮ ಬೆಳೆ ಬಂದಿದೆ.
* ಬರಗಾಲ ಪರಿಹಾರಕ್ಕಾಗಿ ಕೇಂದ್ರದಿಂದ ರೂ. 282 ಕೋಟಿ ಅನುಧಾನ ಬಿಡುಗಡೆ.
* ಬರಗಾಲ ಪೀಡಿತ ಜಿಲ್ಲೆಗಳು ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಗಳಿಗೂ ಸಮಾನವಾಗಿ ಅನುಧಾನ ಬಿಡುಗಡೆ.
* 1.35ಕೋಟಿ ರೈತರಿಗೆ ಸರಿಯಾದ ಸಮಯದಲ್ಲಿ ಉತ್ತಮ ಬೀಜ ವಿತರಣೆ.
* ಸಾವಯವ ಕೃಷಿಗೆ ರಾಜ್ಯ ಸರ್ಕಾರ ಹೆಚ್ಚು ಆಧ್ಯತೆ ನೀಡಿದ್ದು, ಇದಕ್ಕಾಗಿ ರೂ. 100ಕೋಟಿ ಮೀಸಲು.
* ಪ್ರತ್ಯೇಕ ಕೃಷಿ ಆಯೋಗ ರಚನೆ ಹಾಗೂ ಆಯೋಗಕ್ಕಾಗಿ ರೂ. 19.660 ಕೋಟಿ ಮೀಸಲು.
* ಹನಿ ಮತ್ತು ತುಂತುರು ನಿರಾವರಿ ಯೋಜನೆಗೆ ಹೆಚ್ಚು ಆಧ್ಯತೆ
* ಪಶುಸಂಗೋಪನೆ ಮತ್ತು ಮೀನುಗಾರಿಕೆಗಾಗಿ ರೂ. 1.357ಕೋಟಿ ಅನುಧಾನ ಬಿಡುಗಡೆ.
* ಸಾವಯವ ಕೃಷಿಯನ್ನು ಹೆಚ್ಚು ಅನುಷ್ಠಾನಕ್ಕೆ ತಂದ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ.
* ಕೃಷಿ ಮತ್ತು ತೋಟಗಾರಿಕೆ ವಲಯದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ.
* ಸುಮಾರು 89 ಲಕ್ಷ ಎಮ್ಮೆ , ದನ -ಜಾನುವಾರಗಳ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕಿಸಲಾಗಿದೆ.
* 1.10 ಲಕ್ಷ ಜನರಿಗೆ ಮೇವು ಬೆಳೆಯಲು ಅವಕಾಶ ನೀಡಲಾಗಿದೆ.
* 3.91.600 ಪಶುವೈದ್ಯರ ನೇಮಕ.
* ರೇಷ್ಮೆ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
* ಸ್ತ್ರೀ ಶಕ್ತಿ ಸಂಘಟನೆಗಳ ಮೂಲಕ ಮಹಿಳೆಯರಿಗಾಗಿ ಶೇ 4ರ ಬಡ್ಡಿದರದಲ್ಲಿ ಸಾಲ ಮಂಜೂರು.
* ರೈತರ ಹೊಲಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ.
* ರೂ. 25 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ.
* ಕಡಿಮೆ ಬಡ್ಡಿ ದರದಲ್ಲಿ ಕೃಷಿ ಬೆಳೆಗಾರರಿಗೆ ಸಾಲ ವಿತರಣೆ.
* ರಾಜ್ಯದಲ್ಲಿ ಅಂತರ್ಜಲ ಹೆಚ್ಚಿಸಲು ಕ್ರಮ.
* ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯ ಕ್ರಮ.
* ಬಾಗಲಕೋಟೆ, ಧಾರವಾಡ, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆ ಸ್ಥಾಪನೆಗೆ ಚಿಂತನೆ.
* ದೇಶದಲ್ಲಿಯೇ ಮೊದಲ ಬಾರಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಆಯೋಗ ರಚನೆ.
* ಭೂ ಚೇತನ ಯೋಜನೆ ಮುಂದುವರೆಯುವಿಕೆ.
* ರೈತರಿಗೆ ಉತ್ತಮ ಹಾಗೂ ಹೆಚ್ಚು ಇಳುವರಿ ಬರುವ ಬೆಳೆ ಬೆಳೆಯಲು ಮೊಬೈಲ್ ಮೂಲಕ ಮಾಹಿತಿ ನೀಡುವುದು. ಸುಮಾರು 57 ಲಕ್ಷ ರೈತರಿಗೆ ಇದರ ಉಪಯೋಗ.
* ಸುವರ್ಣ ಭೂಮಿ ಯೋಜನೆ ಮುಂದುವರೆಯುವಿಕೆ.
* ದಾವಣಗೆರೆ ಮತ್ತು ತುಮಕೂರಿನಲ್ಲಿ ಲಾಲ್ಬಾಗ್ ಮಾದರಿಯಲ್ಲಿ ಉದ್ಯಾನ ನಿರ್ಮಾಣ ಚಿಂತನೆ
* 5 ತೆಂಗು ಉದ್ಯಾನ ಸ್ಥಾಪನೆ.
* ಅಥಣಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ.
* ಹಾಲಿನ ಪ್ರೋತ್ಸಾಹ ದರ ರೂ. 2 ಮುಂದುವರೆಯುವಿಕೆ.
* ಭಟ್ಕಳ ಮತ್ತು ಕಾರವಾರದಲ್ಲಿ ಮೀನುಗಾರಿಕೆ ಪ್ರದೇಶ ವಿಸ್ತರಣೆ.
* ಬಾಗಲಕೋಟೆಯಲ್ಲಿ ಕೃಷಿ ವಿ.ವಿ. ಸ್ಥಾಪನೆ.
* ಸಾಂಬಾರು ಪದಾರ್ಥ ಅಭಿವೃದ್ಧಿ ಮಂಡಳಿ ಸ್ಥಾಪನೆ.
* 43 ಹೊಸ ತಾಲ್ಲೂಕುಗಳ ಘೋಷಣೆ.
* ಬಡವರಿಗೆ ರೂ. 2 ಕೆಜಿ ಅಕ್ಕಿ ವಿತರಣೆ.
* ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ರೂ. 200 ಕೋಟಿ ಮೀಸಲು.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.