ತುಮಕೂರು: 2015ನೇ ಸಾಲಿನ ವೀಚಿ ಸಾಹಿತ್ಯ ಪ್ರಶಸ್ತಿ ಮತ್ತು ವೀಚಿ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಕ್ರಮವಾಗಿ ಕೇಶವರೆಡ್ಡಿ ಹಂದ್ರಾಳ ಅವರ ‘ಮರೆತ ಭಾರತ’ ಮತ್ತು ಚೀಮನಹಳ್ಳಿ ರಮೇಶ್ಬಾಬು ಅವರ ‘ಹದ’ ಕೃತಿ ಆಯ್ಕೆಯಾಗಿದೆ.

ವೀಚಿ ಸಾಹಿತ್ಯ ಪ್ರಶಸ್ತಿ ₹ 25 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ವೀಚಿ ಉದಯೋನ್ಮುಖ ಪ್ರಶಸ್ತಿ ₹ 5 ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಕೇಶವರೆಡ್ಡಿ ಹಂದ್ರಾಳ ಅವರ ಲೇಖನಗಳ ಸಂಕಲನ ‘ಮರೆತ ಭಾರತ’ವು ಭಾರತದ ಮರೆಯಾಗುತ್ತಿರುವ ಗ್ರಾಮೀಣ ಬದುಕನ್ನು ಪುನರ್ ರಚಿಸುವ ಮಹತ್ವದ ಕೃತಿಯಾಗಿದೆ.

ಉದಯೋನ್ಮುಖ ಲೇಖಕರಿಗೆ ನೀಡುವ ವೀಚಿ ಪ್ರಶಸ್ತಿಗೆ ಚೀಮನಹಳ್ಳಿ ರಮೇಶ್ಬಾಬು ಅವರ ‘ಹದ’ ಕಾದಂಬರಿಯ ದಲಿತ ಪರಿಸರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಾದಂಬರಿಯಲ್ಲಿ ನಾಯಕನ ಸೂಕ್ಷ್ಮ ಆತ್ಮಶೋಧ ಮತ್ತು ಹೊಸ ಅರಿವಿನ ಆಸ್ಫೋಟವನ್ನು ದಿಟ್ಟವಾಗಿ ಚಿತ್ರಿಸಲಾಗಿದೆ. ಫೆಬ್ರುವರಿ ತಿಂಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್. ನಾಗರಾಜು ತಿಳಿಸಿದ್ದಾರೆ.

ಲೇಖಕ ಎಚ್.ಎಸ್. ವೆಂಕಟೇಶ ಮೂರ್ತಿ, ಬಿ.ಆರ್. ಲಕ್ಷ್ಮಣ್ರಾವ್, ಎಸ್.ಜಿ. ಸಿದ್ದರಾಮಯ್ಯ ಅವರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.