ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಮೂಲದ ಬಾಲಕನ ಯೋಗಾ ಸಾಧನೆ: ಐರೋಪ್ಯ ಯೋಗಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ

Published 25 ನವೆಂಬರ್ 2023, 16:25 IST
Last Updated 25 ನವೆಂಬರ್ 2023, 16:25 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಭಾರತ ಮೂಲದ, ಸದ್ಯ ಆಗ್ನೇಯ ಇಂಗ್ಲೆಂಡ್‌ನಲ್ಲಿ ನೆಲೆಸಿರುವ 13 ವರ್ಷದ ಯೋಗಾ ಪ್ರತಿಭೆ ಈಶ್ವರ್‌ ಶರ್ಮ ಸ್ವೀಡನ್‌ನಲ್ಲಿ ನಡೆದ ‘ಐರೋಪ್ಯ ಯೋಗಾ ಕ್ರೀಡೆ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನದ ಪದಕ ಗಳಿಸಿದ್ದಾನೆ. 

ಅತಿ ಚಿಕ್ಕ ವಯಸ್ಸಿನಲ್ಲೇ ಯೋಗಾದಲ್ಲಿ ಸಾಧನೆ ಮಾಡಿರುವ ಈಶ್ವರ್‌ ಈಗಾಗಲೇ, ಐದು ವಿಶ್ವ ಚಾಂಪಿಯನ್‌ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಈಶ್ವರ್‌ ತಂದೆ ಡಾ ವಿಶ್ವನಾಥ್‌ ಮೈಸೂರಿನವರು ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.  

ಕೆಂಟ್‌ ಪ್ರಾಂತ್ಯದ ಸೆವೆನೋಕ್ಸ್‌ನಲ್ಲಿರುವ ಈಶ್ವರ್‌, ಮೂರು ವರ್ಷ ಪ್ರಾಯದವನಿದ್ದಾಗಲೇ ಯೋಗಾಭ್ಯಾಸ ಆರಂಭಿಸಿದ್ದ. ಆತನ ತಂದೆ ನಿತ್ಯ ಬೆಳಗ್ಗೆ ಯೋಗಾ ಮಾಡುವುದನ್ನು ಗಮನಿಸುತ್ತಿದ್ದ ಬಾಲಕ ಈಗ ಹಲವು ಚಾಂಪಿಯನ್‌ಶಿಪ್‌ಗಳನ್ನು ತನ್ನದಾಗಿಸಿಕೊಂಡಿದ್ದಾನೆ. 

‘ಸ್ವೀಡಿಷ್‌ ಯೋಗಾ ಕ್ರೀಡೆ ಫೆಡರೇಷನ್‌’ನ ಸಹಯೋಗಾದೊಂದಿಗೆ ‘ಅಂತರರಾಷ್ಟ್ರೀಯ ಯೋಗಾ ಕ್ರೀಡೆ ಫೆಡರಷೇನ್‌,’ ಕಳೆದ ವಾರ ಸ್ವೀಡನ್‌ನಲ್ಲಿ ಆಯೋಜಿಸಿದ್ದ ಐರೋಪ್ಯ ಕೂಟದಲ್ಲಿ ಪಾಲ್ಗೊಂಡಿದ್ದ ಈಶ್ವರ್‌, 12–14 ವರ್ಷ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾನೆ.  

‘ಯೋಗಾದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಈಶ್ವರ್‌ ಉತ್ಸುಕನಾಗಿದ್ದಾನೆ. ಅದರಲ್ಲೂ, ವಿಶೇಷ ಚೇತನ ಮಕ್ಕಳಿಗೆ ಯೋಗಾದ ಅಗತ್ಯದ ಕುರಿತು ತಿಳಿಸಲು ಬಯಸಿದ್ದಾನೆ’ ಎಂದು ಆತನ ಕುಟುಂಬಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರ ಜತೆಗೆ, ಈಶ್ವರ್‌ಗೆ ಇರುವ ಸ್ವಲೀನ (ಆಟಿಸಂ) ಮತ್ತು ಎಡಿಎಚ್‌ಡಿ (ಅಟೆಂನ್ಷನ್‌ ಡಿಫಿಸಿಟ್‌ ಹೈಪರ್‌ಆ್ಯಕ್ಟಿವ್‌ ಡಿಸಾರ್ಡರ್‌) ಅನ್ನು ಅವರು ಉಲ್ಲೇಖಿಸಿದ್ದಾರೆ.  

ಕೋವಿಡ್‌ ಸಾಂಕ್ರಾಮಿಕದ ಕಾಲದಲ್ಲಿ ಈಶ್ವರ್‌ 14 ದೇಶಗಳ ಸುಮಾರು 40 ಮಕ್ಕಳಿಗೆ ನಿತ್ಯ ಬೆಳಗ್ಗೆ ಆನ್‌ಲೈನ್‌ನಲ್ಲಿ ಯೋಗಾ ಹೇಳಿಕೊಡುತ್ತಿದ್ದ. ಇದಕ್ಕಾಗಿ ಬ್ರಿಟನ್‌ನ ಅಂದಿನ ಪ್ರಧಾನಿ ಬೋರಿಸ್‌ ಜಾನ್ಸನ್‌ ಪ್ರಶಸ್ತಿ ನೀಡಿ ಗೌರವಿಸಿದ್ದರು. 

‘ಬ್ರಿಟಿಷ್‌ ಸಿಟಿಜನ್‌ ಯೂತ್‌’ ಪ್ರಶಸ್ತಿಯನ್ನೂ ಈಶ್ವರ್ ಪಡೆದಿದ್ದಾನೆ. ಈಶ್ವರ್‌ ಮತ್ತು ಆತನ ‘ಐ ಯೋಗಾ‘ ಸಂಸ್ಥೆ ಹಾಗೂ ಆತನ ತಂದೆ ಡಾ ವಿಶ್ವನಾಥ್‌ ಜಗತ್ತಿಗೆ ಯೋಗಾದ ಮಹತ್ವ ತಿಳಿಸುವ ಪ್ರಯತ್ನದಲ್ಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT