ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ: ಅಪಹರಣಕ್ಕೊಳಗಾಗಿದ್ದ ಪೊಲೀಸರ ಬಿಡುಗಡೆ

Published 1 ಜುಲೈ 2023, 16:12 IST
Last Updated 1 ಜುಲೈ 2023, 16:12 IST
ಅಕ್ಷರ ಗಾತ್ರ

ತಪಚುಲಾ (ಮೆಕ್ಸಿಕೊ): ದಕ್ಷಿಣ ಮೆಕ್ಸಿಕೊದಲ್ಲಿ ಅಪಹರಣಕ್ಕೊಳಗಾಗಿದ್ದ 16 ಪೊಲೀಸರನ್ನು ಅಪಹರಣಕಾರರು ಮೂರು ದಿನಗಳ ಬಳಿಕ ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಚಿಯಾಪಾಸ್‌ ರಾಜ್ಯದ ಗವರ್ನರ್‌ ರುಟಿಲಿಯೊ ಎಸ್ಕಾಂಡನ್‌ ಅವರು, ‘ಅಪಹರಣಕ್ಕೊಳಗಾಗಿದ್ದ 16 ಪೊಲೀಸರು ಶುಕ್ರವಾರ ಮಧ್ಯಾಹ್ನ ಬಿಡುಗಡೆಯಾಗಿದ್ದಾರೆ’ ಎಂದಿದ್ದಾರೆ.

ಅಪಹರಣಕಾರರು, ಪೊಲೀಸರನ್ನು ಯಾವ ಆಧಾರದ ಮೇಲೆ ಬಿಡುಗಡೆ ಮಾಡಿದರು ಎಂಬ ಮಾಹಿತಿ ಲಭ್ಯವಿಲ್ಲ.

‘ಮೂವರು ಪೊಲೀಸರನ್ನು ಕೆಲಸದಿಂದ ವಜಾ ಮಾಡಬೇಕು ಹಾಗೂ ಕಳೆದ ವಾರ ಗುಂಪೊಂದು ಅಪಹರಿಸಿದ್ದ ಸ್ಥಳೀಯ ಗಾಯಕ ನೆಯೆಲಿ ಸಿನ್ಒ ಅವರನ್ನು ಬಿಡುಗಡೆಗೊಳಿಸಬೇಕು’ ಎಂದು ಇವರನ್ನು ಅಪಹರಿಸಿದ್ದ ಅಪಹರಣಕಾರರು ಬೇಡಿಕೆ ಇಟ್ಟಿದ್ದರು.

ಒಕೊಜಕೌಟ್ಲಾ– ತುಕ್ಸ್‌ಟ್ಲಾ ಹೆದ್ದಾರಿಯಲ್ಲಿ ಮಂಗಳವಾರದಂದು ಹಲವಾರು ವಾಹನಗಳಲ್ಲಿ ಬಂದಿದ್ದ ಬಂದೂಕುಧಾರಿಗಳು ಪೊಲೀಸ್‌ ಟ್ರಕ್‌ಗಳನ್ನು ಅಡ್ಡಗಟ್ಟಿ ಪೊಲೀಸರನ್ನು ಅಪಹರಿಸಿದ್ದರು. ಆದರೆ, ಟ್ರಕ್‌ಗಳಲ್ಲಿದ್ದ 17 ಮಹಿಳಾ ಪೊಲೀಸರನ್ನು ಅಪಹರಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT