ವಾಷಿಂಗ್ಟನ್: ಭಾರತ-ಅಮೆರಿಕ ದ್ವಿಪಕ್ಷೀಯ ಬಾಂಧವ್ಯದ ಇತಿಹಾಸದಲ್ಲಿ 2022 ಅತ್ಯಂತ ಹೆಚ್ಚು ಮಹತ್ವ ಬೀರಿದ ವರ್ಷವಾಗಿದೆ. ಈ ಬಾಂಧವ್ಯ ಮತ್ತಷ್ಟು ಎತ್ತರಕ್ಕೆ ಬೆಳೆಯುವ ವಿಶ್ವಾಸವಿದೆ. ಇದಕ್ಕೆ ಬೈಡನ್ ಆಡಳಿತ ಬದ್ಧವಾಗಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಪಂಚದ ಯಾವುದೇ ರಾಷ್ಟ್ರದ ಜತೆಗೆ ಇದೇ ರೀತಿಯಾಗಿ ಅತ್ಯಂತ ಪರಿಣಾಮಕಾರಿ ಮೈತ್ರಿಯನ್ನು ಸಾಧಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತ ಎದುರು ನೋಡುತ್ತದೆ ಎಂದೂರಾಷ್ಟ್ರೀಯ ಭದ್ರತಾ ಸಲಹೆಯ ಉಪ ಮುಖ್ಯಸ್ಥಜಾನ್ ಫೈನರ್ ಅವರು ಪ್ರತಿಪಾದಿಸಿದ್ದಾರೆ.

ಭಾರತೀಯ ರಾಯಭಾರ ಕಚೇರಿಯು ಭಾನುವಾರ ಭಾರತೀಯರ ವಿವಿಧ ಧರ್ಮಗಳ ಹಬ್ಬಗಳ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಅಮೆರಿಕದ ಪ್ರಜೆಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಜಾಗತಿಕ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯಲು ಅಮೆರಿಕ ಮತ್ತು ಅಧ್ಯಕ್ಷ ಜೋ ಬೈಡನ್ ಅವರುನಿಜವಾದ ಜೊತೆಗಾರರನ್ನು ಹುಡುಕುತ್ತಿರುವಾಗ ಆ ಪಟ್ಟಿಯಲ್ಲಿ ಭಾರತ ಹಾಗೂ ಪ್ರಧಾನಿ ಮೋದಿ ಅತ್ಯಂತ ಎತ್ತರದ ಸ್ಥಾನದಲ್ಲಿ ಕಂಡರು.ಇತ್ತೀಚೆಗಷ್ಟೇ ನಡೆದಜಿ20 ಶೃಂಗಸಭೆಯಲ್ಲಿ ಹಲವು ರಾಷ್ಟ್ರಗಳ ನಡುವೆ ಒಮ್ಮತಾಭಿಪ್ರಾಯ ರೂಪಿಸುವಲ್ಲಿ ಮೋದಿ ಅವರು ಪ್ರಮುಖ ಪಾತ್ರ ವಹಿಸಿದ್ದನ್ನು ಕಂಡಿದ್ದೇವೆ. ಅಲ್ಲದೆ ಮೋದಿ ಅವರು ನೀಡಿದ ‘ಇದು ಯುದ್ಧಕಾಲವಲ್ಲ’ ಹೇಳಿಕೆಯು ಅಣ್ವಸ್ತ್ರ ಬಳಕೆಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಜಾಗತಿಕ ಅಪಾಯವನ್ನು ಎತ್ತಿ ತೋರಿಸಿದೆ’ ಎಂದು ಜಾನ್ ಫೈನರ್ ಹೇಳಿದರು.

ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಮಾತನಾಡಿ, ಮೋದಿ ಮತ್ತು ಬೈಡನ್ ಅವರು ದ್ವಿಪಕ್ಷೀಯ ಬಾಂಧ್ಯವ ವೃದ್ಧಿಸುವ ನಿಟ್ಟಿನಲ್ಲಿ ಈಗಾಗಲೇ 15ಕ್ಕೂ ಹೆಚ್ಚು ಬಾರಿ ಭೇಟಿಯಾಗಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.