ವಾಷಿಂಗ್ಟನ್: ‘ಅಮೆರಿಕದ ಅಧ್ಯಕ್ಷರಾಗುವುದನ್ನು ಡೊನಾಲ್ಡ್ ಟ್ರಂಪ್ ಬಯಸಿರಲಿಲ್ಲ. ಕಳೆದ ವರ್ಷ ಟ್ರಂಪ್ ಅವರ ಗೆಲುವಿನ ಫಲಿತಾಂಶ ತಿಳಿದ ಬಳಿಕ ಟ್ರಂಪ್ ಅವರ ಪತ್ನಿ ಮೆಲಾನಿಯಾ ಸಂತೋಷದಿಂದ ಕಂಬನಿ ಮಿಡಿದಿದ್ದಲ್ಲ’ ಅಮೆರಿಕ ಪತ್ರಕರ್ತ ಬರೆದ ಹೊಸ ಪುಸ್ತಕದಲ್ಲಿ ದಾಖಲಾಗಿದೆ.

‘ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಪಡೆಯುವುದೇ ಟ್ರಂಪ್ ಅಂತಿಮ ಗುರಿಯಾಗಿರಲಿಲ್ಲ’ ಎಂದು ಮೈಕೆಲ್ ವೂಲ್ಫ್ ಬರೆದ ‘ಫೈರ್ ಆ್ಯಂಡ್ ಫ್ಯೂರಿ: ಇನ್‌ಸೈಡ್ ದ ಟ್ರಂಪ್ ವೈಟ್‌ಹೌಸ್’ ಕೃತಿಯಲ್ಲಿ ದಾಖಲಿಸಲಾಗಿದೆ.

‘ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದರಿಂದ ಜಗತ್ತಿನ ಅತ್ಯಂತ ಖ್ಯಾತ ವ್ಯಕ್ತಿಯಾಗಬಹುದು’ ಎಂದು ತಮ್ಮ ಆಪ್ತ ಸ್ಯಾಮ್ ನನ್‌ಬರ್ಗ್ ಅವರಿಗೆ ತಿಳಿಸಿದ್ದರು ಎನ್ನುವುದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

‘ಟಿ.ವಿ. ವಾಹಿನಿಯಲ್ಲಿ ವೃತ್ತಿ ಮುಂದುವರಿಸಲು ಬಯಸುವುದಾದರೆ, ಮೊದಲು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ದೀರ್ಘಕಾಲದ ಸ್ನೇಹಿತ ಹಾಗೂ ಫಾಕ್ಸ್ ನ್ಯೂಸ್ ಮುಖ್ಯಸ್ಥ ರೋಜರ್ ಸಲಹೆ ನೀಡಿದ್ದರು’ ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.

ನಿರಾಕರಣೆ: ‘ಟ್ರಂಪ್ ಅಧ್ಯಕ್ಷರಾದ ಮೇಲೆ ಪುಸ್ತಕದ ಲೇಖಕರು ಐದರಿಂದ ಏಳು ನಿಮಿಷಗಳ ಕಾಲ ಸಂಭಾಷಣೆ ನಡೆಸಿದ್ದಾರೆ. ಪುಸ್ತಕದಲ್ಲಿ ದಾಖಲಾಗಿರುವ ಯಾವುದೇ ವಿಚಾರದಲ್ಲೂ ಸತ್ಯಾಂಶವಿಲ್ಲ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹೇಳಿದ್ದಾರೆ.

‘ನ್ಯೂಯಾರ್ಕ್ ನಿಯತಕಾಲಿಕೆಯಲ್ಲಿ ಪುಸ್ತಕದ ಕೆಲವು ಅಂಶಗಳನ್ನು ‘ಅಧ್ಯಕ್ಷರಾಗಲು ಬಯಸದಿದ್ದ ಡೊನಾಲ್ಡ್ ಟ್ರಂಪ್’ ಶೀರ್ಷಿಕೆಯಡಿ ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.