ವಾಷಿಂಗ್ಟನ್: ರಾತ್ರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 34 ವರ್ಷ ವಯಸ್ಸಿನ ಭಾರತೀಯ ವ್ಯಕ್ತಿ ಪ್ರಭು ರಾಮಮೂರ್ತಿಯನ್ನು ಮಿಷಿಗನ್ ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ವಿಮಾನ ಪ್ರಯಾಣದ ವೇಳೆ ನಿದ್ರೆ ಮಾಡುತ್ತಿದ್ದಾಗ ಪಕ್ಕದ ಆಸನದಲ್ಲಿ ಕುಳಿತಿದ್ದ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ದೂರು ನೀಡಿದ್ದಳು. ಬಂಧಿತ ವ್ಯಕ್ತಿ ಅಮೆರಿಕದಲ್ಲಿ ತಾತ್ಕಾಲಿಕ ವೀಸಾ ಪಡೆದು ವಾಸವಿದ್ದಾನೆ. ಆರೋಪಿಯನ್ನು ಗಂಭೀರ ಲೈಂಗಿಕ ಕಿರುಕುಳ ಆರೋಪದಡಿ ಬಂಧಿಸಲಾಗಿದೆ. ಮಿಷಗನ್‌ನ ಫೆಡರಲ್ ಕೋರ್ಟ್ ಆರೋಪಿಗೆ ಜಾಮೀನು ನೀಡದಂತೆ ಆದೇಶಿಸಿದೆ.

22ರ ಹರೆಯದ ಯುವತಿ ‘ಸ್ಪಿರಿಟ್ ಏರ್‌ಲೈನ್ಸ್’ ವಿಮಾನದಲ್ಲಿ ಲಾಸ್ ವೆಗಾಸ್‌ನಿಂದ ಡೆಟ್ರಾಯಿಟ್‌ಗೆ ಜನವರಿ 3ರಂದು ಪ್ರಯಾಣಿಸಿದ್ದರು. ಕಿಟಕಿಯ ಬಳಿ ಕುಳಿತಿದ್ದ ಆಕೆಯ ಪಕ್ಕದ ಆಸನದಲ್ಲಿ ರಾಮಮೂರ್ತಿ ಕುಳಿತಿದ್ದ. ಆತನ ಪತ್ನಿಯೂ ಜೊತೆಗಿದ್ದರು.

‘ನಾನು ನಿದ್ರೆಯಿಂದ ಎಚ್ಚರವಾಗುವಾಗ ನನ್ನ ಪ್ಯಾಂಟ್ ಮತ್ತು ಶರ್ಟಿನ ಬಟನ್‌ಗಳು ತೆಗೆದಿದ್ದವು. ಆತನ ಕೈಗಳು ನನ್ನ ಪ್ಯಾಂಟಿನ ಒಳಗಿದ್ದವು’ ಎಂದು ಸಂತ್ರಸ್ತ ಯುವತಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ.

ಸಂತ್ರಸ್ತ ಯುವತಿಯ ಪಕ್ಕದಲ್ಲಿ ತನ್ನ ಪತ್ನಿಯ ಜೊತೆ ಆರೋಪಿ ಕುಳಿತಿದ್ದ. ಯುವತಿ ಎಚ್ಚೆತ್ತ ಕೂಡಲೇ ಆತ ಆಕೆಯ ಮೈಯಿಂದ ಕೈ ತೆಗೆದಿದ್ದಾನೆ. ಆಕೆ ಅಳುತ್ತಾ ವಿಮಾನದ ಹಿಂಬದಿಗೆ ಹೋಗಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.