ಇಸ್ಲಾಮಾಬಾದ್: ‘ಒಳ್ಳೆಯ ಭಾಷಣ ಮಹಿಳೆಯರ ಸ್ಕರ್ಟ್ ಇದ್ದಂತೆ ಇರಬೇಕು; ವಿಷಯ ಹಿಡಿದಿಡಲು ಸಾಕೆನಿಸುವಷ್ಟು ಉದ್ದ ಹಾಗೂ ಕುತೂಹಲ ಮೂಡಿಸಲು ಸಾಕೆನಿಸುವಷ್ಟು ಗಿಡ್ಡ’ ಎಂದು ಭಾಷಣವೊಂದರಲ್ಲಿ ಹೇಳಿದ್ದ ಪಾಕಿಸ್ತಾನ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳ ವಿರುದ್ಧ ಮಹಿಳಾ ಹಕ್ಕುಗಳ ಕಾರ್ಯಕರ್ತರು ಕಿಡಿ ಕಾರಿದ್ದಾರೆ.

ಸ್ಕರ್ಟ್ ಕುರಿತ ಈ ಹೇಳಿಕೆ ಮಹಿಳೆಯರಿಗೆ ಮಾಡಿರುವ ಅವಮಾನ. ಕೂಡಲೇ ಸಾರ್ವಜನಿಕವಾಗಿ ನ್ಯಾಯಮೂರ್ತಿ ಸಾಖಿಬ್ ನಿಸಾರ್ ಅವರು ಕ್ಷಮೆಕೋರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೇ 13ರಂದು ಕರಾಚಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ನ್ಯಾ.ಸಾಖಿಬ್ ಭಾಷಣ ಮಾಡುವಾಗ, ಬ್ರಿಟಿಷರ ಮಾಜಿ ಪ್ರಧಾನಿ ವಿನ್ಸ್‌ಟನ್ ಚರ್ಚಿಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು.

ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಮೆನ್ಸ್ ಆ್ಯಕ್ಷನ್ ಫೋರಮ್‌ನ ಕರಾಚಿ ಘಟಕದ ಕಾರ್ಯಕರ್ತೆಯರು, ‘ಮಹಿಳೆಯರ ಬಗ್ಗೆ ಕಾನೂನು ವೃತ್ತಿಯಲ್ಲಿ ಆಳವಾಗಿ ಬೇರೂರಿರುವ ಲಿಂಗ ತಾರತಮ್ಯವನ್ನು ಇದು ತೋರಿಸುತ್ತದೆ. ಆದ್ದರಿಂದ ನ್ಯಾಯಮೂರ್ತಿಗಳು ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.