ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾದಲ್ಲಿ 6 ತೀವ್ರತೆಯ ಭೂಕಂಪ

Published 9 ಸೆಪ್ಟೆಂಬರ್ 2023, 16:19 IST
Last Updated 9 ಸೆಪ್ಟೆಂಬರ್ 2023, 16:19 IST
ಅಕ್ಷರ ಗಾತ್ರ

ಜಕಾರ್ತಾ: ಇಂ‌ಡೊನೇಷ್ಯಾದ ಸುಲವೇಸಿ ದ್ವೀಪದ ಬಳಿ ಶನಿವಾರ ರಿಕ್ಟರ್‌ ಮಾಪಕದಲ್ಲಿ 6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಸ್ಥಳೀಯ ಕಾಲಮಾನ ರಾತ್ರಿ 9:43ಕ್ಕೆ ಭೂಕಂಪ ಸಂಭವಿಸಿದೆ. ಕಂಪನದ ಕೇಂದ್ರಬಿಂದು 9.9 ಕಿಲೋ ಮೀಟರ್ ಆಳದಲ್ಲಿ ಇತ್ತು. ತಕ್ಷಣಕ್ಕೆ ಸುನಾಮಿಯ ಎಚ್ಚರಿಕೆ ನೀಡಿಲ್ಲ. ಆದರೆ, ಸಂಭವನೀಯ ಭೂಕಂಪನದ ಬಗ್ಗೆ ಇಂಡೊನೇಷ್ಯಾದ ಭೂ ಭೌತವಿಜ್ಞಾನ ಸಂಸ್ಥೆ (ಬಿಎಂಕೆಜಿ) ಎಚ್ಚರಿಕೆ ನೀಡಿದೆ. 

‘ಭೂಕಂಪ ಸಂಭವಿಸಿದಾಗ ನಾನು ನಿದ್ರೆಯಲ್ಲಿದ್ದೆ. ತಕ್ಷಣ ಹಾಸಿಗೆಯಿಂದ ಜಿಗಿದುಬಿಟ್ಟೆ. ಕಂಪನವಾದಾಗ ಅಕ್ಕಿ ಜರಡಿಯನ್ನು ಅಲುಗಾಡಿಸಿದ ರೀತಿಯಲ್ಲಿ ಮೇಲೆ ಕಳೆಗೆ ಆದಂತೆ ಅನುಭವ ಉಂಟಾಯಿತು. ನಿಜಕ್ಕೂ ಪ್ರಬಲ ಕಂಪನ. ನಾವು ಕಂಪನ ಕೇಂದ್ರದ ಸಮೀಪವೇ ಇದ್ದೆವು. ಸದ್ಯ ನಾನು ನನ್ನ ಕುಟುಂಬ ಮತ್ತು ನೆರೆಹೊರೆಯವರು ಬಯಲು ಪ್ರದೇಶದಲ್ಲಿ ಆಶ್ರಯ ಪಡೆದಿದ್ದೇವೆ’ ಎಂದು ಕೇಂದ್ರ ಸುಲವೇಸಿಯ ಮಾಲಿ ಗ್ರಾಮದ 41 ವರ್ಷದ ಗೃಹಿಣಿ ಖಮರಿಯಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT