ಪೆಶಾವರ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾದ ನಂತರ ಸಂಗೀತಗಾರರಿಗೆ, ಸಂಗೀತ ಸಂಯೋಜಕರು ಹಾಗೂ ಕಲಾವಿದರಿಗೆ ಅಸ್ತಿತ್ವದ ಚಿಂತೆ ಯೊಂದಿಗೆ ಜೀವದ ಆತಂಕವೂ ಕಾಡುತ್ತಿದೆ.

ಜೀವ ಬೆದರಿಕೆ ಜೊತೆಜೊತೆಗೆ ಸಂಗೀತಕ್ಕೆ ಒದಗಬಹುದಾದ ವಿಪತ್ತನ್ನು ನೆನೆದು ಅವರು ದೇಶ ತೊರೆಯುತ್ತಿದ್ದಾರೆ. ತಮ್ಮ ಜೀವ ಹಾಗೂ ತಮ್ಮ ಜೀವದ ಜೀವವೇ ಆದ ಸಂಗೀತವನ್ನು ಉಳಿಸಿಕೊಳ್ಳುವ ದಾರಿ ಕಾಣದೇ ಪಲಾಯನ ಮಾಡುತ್ತಿದ್ದಾರೆ.

ನೂರಾರು ಸಂಗೀತ ಕಾರ್ಯಕ್ರಮಗಳು ರದ್ದಾಗಿದ್ದು, ಪಾಕಿಸ್ತಾನದ ಸಂಗೀತ ಪೋಷಕರು ಕಾಬೂಲ್‌ನಲ್ಲಿರುವ ತಮ್ಮ ಕಚೇರಿಗಳನ್ನು ಮುಚ್ಚುತ್ತಿದ್ದಾರೆ. ಬಹುತೇಕ ಕಾರ್ಯಕ್ರಮಗಳಿಗೆ ಮುಂಗಡವಾಗಿ ಹಣ ನೀಡಿದ್ದ ಅವರು ದಿವಾಳಿಯಾಗಿದ್ದಾರೆ.

ಅಫ್ಗಾನಿಸ್ತಾನವು ತಾಲಿಬಾನ್ ವಶಕ್ಕೆ ಬಂದಾಗಿನಿಂದ ಸಂಗೀತ ಕಲಾವಿದರು ತಮ್ಮ ವಾದ್ಯಪರಿಕರಗಳನ್ನು ಮನೆಗೆ ಒಯ್ದು ಇಟ್ಟಿದ್ದಾರೆ. ಹಲವು ಕಲಾವಿದರು ಹಾಗೂ ಹಾಡುಗಾರರು ಜೀವ ಉಳಿಸಿಕೊಳ್ಳುವುದಕ್ಕಾಗಿ ಪಾಕಿಸ್ತಾನಕ್ಕೆ ಬರುತ್ತಿದ್ದಾರೆ. ಈ ವೃತ್ತಿಯನ್ನು ಬಿಡದೇ ಹೋದರೆ ತಮಗೆ ಉಳಿಗಾಲವಿಲ್ಲ ಎನ್ನುತ್ತಾರೆ ಅಫ್ಗಾನಿಸ್ತಾನದ ಗಾಯಕ ಪಾಸುನ್ ಮುನಾವರ್. ಇನ್ನೊಬ್ಬ ಹಾಡುಗಾರ ಅಜ್ಮಲ್, ತಮ್ಮ ಪೋಷಾಕು ಬದಲಿಸಿ ಪಾಕಿಸ್ತಾನಕ್ಕೆ ತೆರಳಿದ್ದಾರೆ.

ಅಫ್ಗಾನಿಸ್ತಾನದವರು ಸಂಗೀತಪ್ರಿಯರು. ಅಲ್ಲಿ ಸಂಗೀತ ಕಾರ್ಯಕ್ರಮ ನೀಡಿದಾಗಲೆಲ್ಲ ತಮಗೆ ತುಂಬಾ ಗೌರವ ಸಿಕ್ಕಿದೆ ಎನ್ನುತ್ತಾರೆ ಪಾಕಿಸ್ತಾನದ ಕಲಾವಿದ ಷಾಜಹಾನ್. ಆತಂಕದಿಂದ ಇಲ್ಲಿಗೆ ಬಂದಿರುವ ಅಲ್ಲಿಯ ಕಲಾವಿದರನ್ನು ಸ್ವಾಗತಿಸುವುದಾಗಿಯೂ ಅವರು ಹೇಳಿದರು.

ಸಂಗೀತ ಕಾರ್ಯಕ್ರಮಗಳ ಮೇಲಿನ ನಿಷೇಧದಿಂದಾಗಿ, ಆ ದೇಶದ ಕಲಾವಿದರಿಗೆ ಮಾತ್ರವಲ್ಲದೇ ಪಾಕಿಸ್ತಾನದ ಕಲಾವಿದರಿಗೂ ತೊಂದರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.