ವಾಷಿಂಗ್ಟನ್: ಅಮೆರಿಕದ ಬಳಿಕ ಭಾರತ ಅತಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿದೆ.ಈವರೆಗೆ ಅಮೆರಿಕ 4.2 ಕೋಟಿ ಪರೀಕ್ಷೆಗಳನ್ನು ನಡೆಸಿದ್ದು, ಭಾರತ 1.2 ಕೋಟಿ ಪರೀಕ್ಷೆಗಳನ್ನು ನಡೆಸಿದೆ. ಈ ಮೂಲಕ ಅತಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿದ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಶ್ವೇತ ಭವನ ಹೇಳಿದೆ.

ಅಮೆರಿಕದಲ್ಲಿ 35 ಲಕ್ಷ ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, 1.38 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇನ್ನು ಜಗತ್ತಿನಾದ್ಯಂತ 13.6 ಕೋಟಿ ಜನರಲ್ಲಿ ಸೋಂಕು ಧೃಢಪಟ್ಟಿದ್ದು, 5.86 ಲಕ್ಷ ಜನರು ಮೃತಪಟ್ಟಿದ್ದಾರೆ

ಈಗಿನ ಸರ್ಕಾರದ ಕಾರ್ಯ ವೈಖರಿ ಹಿಂದಿನಸರ್ಕಾರಕ್ಕಿಂತ ಸಂಪೂರ್ಣ ವಿಭಿನ್ನವಾಗಿದೆ. 2009ರಲ್ಲಿರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಸಲಹೆ ಮೇರೆಗೆಒಬಾಮ ಅವರ ಸರ್ಕಾರ ಎಚ್1ಎನ್1 ಜ್ವರ ಪತ್ತೆ ಪರೀಕ್ಷೆಗಳನ್ನು ನಿಲ್ಲಿಸಿತ್ತು ಎಂದುಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಲಿ ಮ್ಯಾಕ್‌ಎನಾನಿ ಅವರು ಹೇಳಿದರು.

ಆದರೆ ಅಧ್ಯಕ್ಷ ಟ್ರಂಪ್ ನೇತೃತ್ವದ ಸರ್ಕಾರ, ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸುತ್ತಿದೆ. ವೆಂಟಿಲೇಟರ್ ಬಳಕೆ, ಚಿಕಿತ್ಸೆಗಾಗಿವೆಂಟಿಲೇಟರ್‌ಗಳ ಮರುಹಂಚಿಕೆ ಸೇರಿದಂತೆ ಕೊರೊನಾ ನಿಯಂತ್ರಣಕ್ಕಾಗಿ ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದ್ದಾರೆ. ಒಬಾಮ ನೇತೃತ್ವದ ಸರ್ಕಾರದ ಮಾದರಿ ನಾವು ಪರೀಕ್ಷೆಗಳನ್ನು ನಿಲ್ಲಿಸಲಿಲ್ಲ. ನಿರಂತರವಾಗಿ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಎಂದು ಅವರು ತಿಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.