ಷಿಕಾಗೊ: ಡೊನಾಲ್ಡ್ ಟ್ರಂಪ್ ಅವರು ಅಧಿಕಾರದ ಗದ್ದುಗೆ ಏರಿ ‘ಮತ್ತೆ ನಾಲ್ಕು ವರ್ಷಗಳ ಆರ್ಭಟ, ಅವ್ಯವಸ್ಥೆ ಹಾಗೂ ಗೊಂದಲಗಳು ಸೃಷ್ಟಿಯಾಗುವುದು ಅಮೆರಿಕನ್ನರಿಗೆ ಬೇಕಾಗಿಲ್ಲ’ ಎಂದು ಹೇಳುವ ಮೂಲಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು, ಕಮಲಾ ಹ್ಯಾರಿಸ್ ಅಧ್ಯಕ್ಷೆಯಾಗಿ ಆಯ್ಕೆಯಾಗಬೇಕು ಎಂಬುದನ್ನು ಒತ್ತಿ ಹೇಳಿದರು.
‘ನಾವು ಕಮಲಾ ಅವರನ್ನು ಅಧ್ಯಕ್ಷರನ್ನಾಗಿ ಸ್ವೀಕರಿಸಲು ಸಿದ್ಧರಾಗಿದ್ದೇವೆ’ ಎಂದು ಒಬಾಮ ಅವರು ಡೆಮಾಕ್ರಟಿಕ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಹೇಳಿದರು.