ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಜೆಎನ್‌.1 ಏರಿಕೆ ತಡೆಗೆ ಕಣ್ಗಾವಲು ಹೆಚ್ಚಿಸಿ: ಡಬ್ಲ್ಯುಎಚ್‌ಒ

Published 24 ಡಿಸೆಂಬರ್ 2023, 15:58 IST
Last Updated 24 ಡಿಸೆಂಬರ್ 2023, 15:58 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ನ ಹೊಸ ಉಪತಳಿ ಜೆಎನ್‌.1ರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳು ಸೋಂಕು ಪ್ರಸರಣದ ಮೇಲೆ ಕಣ್ಗಾವಲು ಹೆಚ್ಚಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಒತ್ತಾಯಿಸಿದೆ.

ಸೋಂಕು ಪ್ರಸರಣ ತಡೆಗೆ ಸಂಬಂಧಿಸಿದ ಕ್ರಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಅದು ಒತ್ತಾಯಿಸಿದೆ.

ಕೋವಿಡ್‌- 19 ವೈರಸ್‌ ಸೋಂಕು ಜಾಗತಿಕವಾಗಿ ನಿರಂತರವಾಗಿ ಹರಡುತ್ತಿದ್ದು, ವೈರಸ್‌ ಆಗಾಗ ಬದಲಾವಣೆ ಮತ್ತು ರೂಪಾಂತರಗೊಳ್ಳುತ್ತಿದೆ. ಜೆಎನ್‌.1 ಉಪ ತಳಿಯ ವೈರಾಣುವಿನಿಂದ ಆರೋಗ್ಯದ ಮೇಲೆ ಅಪಾಯ ಕಡಿಮೆ ಇದೆ. ಆದರೂ ಈ ವೈರಾಣು ಹರಡುವಿಕ ಪತ್ತೆ ಹಚ್ಚುವುದು ಮತ್ತು ನಿಗಾವಹಿಸುವುದನ್ನು ನಾವು ಮುಂದುವರಿಸಬೇಕು ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಜೆಎನ್‌.1 ಉಪ ತಳಿ ಜಾಗತಿಕವಾಗಿ ಕ್ಷಿಪ್ರವಾಗಿ ಹರಡುತ್ತಿರುವ ತಳಿಯನ್ನಾಗಿ ವಿಶ್ವ ಆರೋಗ್ಯಸಂಸ್ಥೆ ವರ್ಗೀಕರಿಸಿದೆ. ಇತ್ತೀಚಿನ ವಾರಗಳಲ್ಲಿ ಜೆಎನ್‌.1 ವೈರಾಣು ಸೋಂಕಿನ ಪ್ರಕರಣಗಳು ಅನೇಕ ದೇಶಗಳಲ್ಲಿ ವರದಿಯಾಗಿದ್ದು, ವೇಗವಾಗಿ ಪ್ರಸರಣವಾಗುತ್ತಿದೆ.

‘ಜೆಎನ್‌.1 ಉಪ ತಳಿ ಪ್ರಸರಣ ತಡೆಗೆ ದೇಶಗಳು ಕಣ್ಗಾವಲು ಮತ್ತು ಜಿನೋಮ್‌ ಸಿಕ್ವೆನ್ಸಿಂಗ್‌ ಪರೀಕ್ಷೆ ಹೆಚ್ಚಿಸಬೇಕು. ಸೋಂಕಿತ ಪ್ರಕರಣಗಳ ದತ್ತಾಂಶ ಹಂಚಿಕೆಯನ್ನು ಖಾತ್ರಿಪಡಿಸಬೇಕು’ ಎಂದು ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

ಕೋವಿಡ್‌: ಕೇರಳದಲ್ಲಿ 128 ಹೊಸ ಪ್ರಕರಣತಿರುವನಂತಪುರ (ಪಿಟಿಐ): ಕೇರಳದಲ್ಲಿ ಭಾನುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ 128 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು ಒಬ್ಬರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಇದೇ ಅವಧಿಯಲ್ಲಿ ದೇಶದಾದ್ಯಂತ 334 ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3000ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT