ಗೊಮಾ, ಕಾಂಗೊ: ಆಫ್ರಿಕಾ ಖಂಡದ ಮಧ್ಯಭಾಗದ ದೇಶವಾದ ಕಾಂಗೊದಲ್ಲಿ (ಡಿಆರ್ಸಿ) ‘ಮಿಲಿಟಿಯಾ’ ಎಂಬ ಬಂಡುಕೋರ ಸಂಘಟನೆಯ ಸದಸ್ಯರು ನಡೆಸಿದ ಗುಂಡಿನ ದಾಳಿಗೆ ನಿರಾಶ್ರಿತರ ಶಿಬಿರದಲ್ಲಿನ 55 ಜನ ಮೃತಪಟ್ಟಿದ್ದಾರೆ.

ಸೋಮವಾರ ರಾತ್ರಿ ಕಾಂಗೊದ ಈಶಾನ್ಯ ಭಾಗವಾದ ನಾರ್ಥ್ ಕಿವು ಪ್ರಾಂತ್ಯದ ಡಿಜೈಬಾ ಎಂಬ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಗುಂಡಿನ ದಾಳಿಯಿಂದ ಹಲವಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ಎ.ಪಿ ಸುದ್ದಿಸಂಸ್ಥೆಯ ವರದಿಗಾರರಿಗೆ ತಿಳಿಸಿದ್ದಾರೆ.

ಪೂರ್ವ ಕಾಂಗೊದಲ್ಲಿ ಹಲವಾರು ವರ್ಷಗಳಿಂದ ಹಿಂಸಾಚಾರ ನಡೆಯುತ್ತಿದೆ. ಇಲ್ಲಿನ ಗಣಿಗಳು, ಖನಿಜ ಸಂಪದ್ಭರಿತ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಮತ್ತು ತಮ್ಮ ಬುಡಕಟ್ಟು ಸಮುದಾಯಗಳನ್ನು ರಕ್ಷಿಸಿಕೊಳ್ಳಲು 120 ಕ್ಕೂ ಹೆಚ್ಚು ಸಂಘಟನೆಗಳು ಪರಸ್ಪರ ಹಾಗೂ ಸರ್ಕಾರದ ವಿರುದ್ಧ ಕಾದಾಡುತ್ತಿವೆ.

ಮಿಲಿಟಿಯಾ ಎಂಬ ಸಂಘಟನೆ ಕಳೆದ ನಾಲ್ಕು ವರ್ಷಗಳಲ್ಲಿ 1800 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಎಂದು ‘ಆಫ್ರಿಕನ್ ಸೆಂಟರ್ ಫಾರ್ ದಿ ಸ್ಟಡಿ ಅಂಡ್ ರಿಸರ್ಚ್ ಆನ್ ಟೆರರಿಸಂ‘ ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.