ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಝಾಂಬಿಕ್: ದೋಣಿ ಮಗುಚಿಬಿದ್ದು 96 ಸಾವು

Published 8 ಏಪ್ರಿಲ್ 2024, 13:29 IST
Last Updated 8 ಏಪ್ರಿಲ್ 2024, 13:29 IST
ಅಕ್ಷರ ಗಾತ್ರ

ಮಾಪುಟೊ: ಮೊಝಾಂಬಿಕ್‌ನ ಉತ್ತರ ಕರಾವಳಿ ಭಾಗದಲ್ಲಿ ಭಾನುವಾರ ದೋಣಿಯೊಂದು ಮಗುಚಿಬಿದ್ದ ಪರಿಣಾಮ ಮಕ್ಕಳು ಸೇರಿದಂತೆ 96 ಮಂದಿ ಸಾವಿಗೀಡಾಗಿದ್ದು, 26 ಜನ ನಾಪತ್ತೆಯಾಗಿದ್ದಾರೆ.

130 ಜನರನ್ನು ಹೊತ್ತಿದ್ದ ದೋಣಿಯು ಲುಂಗಾದಿಂದ ಮೊಝಾಂಬಿಕ್ ದ್ವೀಪಕ್ಕೆ ಪ್ರಯಾಣಿಸುತ್ತಿತ್ತು. ಸಮುದ್ರದ ಮಾರುತಗಳ ಹೊಡೆತದಿಂದ ಈ ದುರ್ಘಟನೆ ಸಂಭವಿಸಿರಬಹುದೆಂದು ಪ್ರಾಥಮಿಕ ವರ‌ದಿಗಳು ತಿಳಿಸಿವೆ’ ಎಂದು ಹಿರಿಯ ಅಧಿಕಾರಿ ಲಾರೆಂಕೊ ಮಚಾಡೊ ಅವರು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಗೆ ಸೋಮವಾರ ತಿಳಿಸಿದ್ದಾರೆ.

‘ದುರಂತಕ್ಕೀಡಾದ ಮೀನುಗಾರಿಕಾ ದೋಣಿಯಲ್ಲಿದ್ದ ಜನರ ಸಂಖ್ಯೆ ಮಿತಿ ಮೀರಿತ್ತು ಮತ್ತು ಅವರನ್ನು ಸಾಗಿಸಲು ಪರವಾನಗಿ ಪಡೆದಿರಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಕಾಲರಾದಿಂದ ಪಾರಾಗಲು ಜನ ವಲಸೆ ಹೋಗುತ್ತಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT