ಶಿಮ್ಲಾ: ಆರಂಭದಿಂದಲೂ ಟಿಬೆಟ್ ಬೌದ್ಧ ಧರ್ಮಗುರು ದಲೈಲಾಮಾ ಅವರ ಮಾನಹಾನಿ ಮಾಡುತ್ತಿರುವ ಚೀನಾ ಒಂದು ‘ನಾಸ್ತಿಕ ದೇಶ’ ಎಂದು ಟಿಬೆಟ್ ದೇಶಾಂತರ ಸರ್ಕಾರದ ಸಂಸದ ತೇನ್ಜಿಂಗ್ ಜಿಗ್ದಾಲ್ ಅವರು ಗುರುವಾರ ಕುಟುಕಿದ್ದಾರೆ.

ಉತ್ತರಾಧಿಕಾರಿ ಆಯ್ಕೆ ಮಾಡುವ ನಿರ್ಧಾರವನ್ನು ಅಧಿಕೃತ ಸಂಸ್ಥೆ ಮತ್ತು ಟಿಬೆಟ್ ಬೌದ್ಧ ಧರ್ಮಗುರು ಕೈಗೊಳ್ಳಲಿದ್ದಾರೆ ಎಂದು ಜಿಗ್ದಾಲ್ ತಿಳಿಸಿದ್ದಾರೆ.

‘ಗಾಡೆನ್ ಫೋದ್ರಾಂಗ್ ಟ್ರಸ್ಟ್ ನನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದೆ. ಬೇರೆ ಯಾರೂ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ’ ಎಂದು ಬುಧವಾರ ದಲೈಲಾಮಾ ಹೇಳಿದ್ದರು. ಗಾಡೆನ್ ಫೋದ್ರಾಂಗ್ ಟ್ರಸ್ಟ್ ಅನ್ನು 2015ರಲ್ಲಿ ದಲೈಲಾಮಾ ಸ್ಥಾಪಿಸಿದ್ದರು.

ಉತ್ತರಾಧಿಕಾರಿ ಆಯ್ಕೆ ಮಾಡುವಾಗ ತನ್ನ ಸಮ್ಮತಿ ಪಡೆಯಬೇಕು ಎಂದು ಚೀನಾ ತಾಕೀತು ಮಾಡಿತ್ತು. ಇದಕ್ಕೆ ಜಿಗ್ದಾಲ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ‘ಚೀನಾ ಬೂಟಾಟಿಕೆಯ ನಾಸ್ತಿಕ ದೇಶ. ಉತ್ತರಾಧಿಕಾರಿಗೆ ಇಂಥದ್ದೇ ಗಡಿಯಿಲ್ಲ. ಎಲ್ಲಿ ಬೇಕಾದರೂ ಜನ್ಮತಾಳಿರಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.