ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಜನರಿಗಾಗಿ ನಾನು ಸಾಯಲು ಸಿದ್ಧ: ಬಾಂಗ್ಲಾ ಪ್ರಧಾನಿ ಹಸೀನಾ

‘ಟೈಮ್‌’ ಮುಖಪುಟದಲ್ಲಿ ಬಾಂಗ್ಲಾ ಪ್ರಧಾನಿ ಹಸೀನಾ 
Published 4 ನವೆಂಬರ್ 2023, 14:58 IST
Last Updated 4 ನವೆಂಬರ್ 2023, 14:58 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಟೈಮ್’ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ‘ತಮ್ಮ ಸರ್ಕಾರವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಉರುಳಿಸುವುದು ಕಷ್ಟ’ ಎಂದು ಸಂದರ್ಶನವೊಂದರಲ್ಲಿ ಪ್ರತಿಪಾದಿಸಿದ್ದಾರೆ.

ಸುದ್ದಿವಾಹಿನಿ ಪ್ರಸಾರ ಮಾಡಿರುವ ಸಂದರ್ಶನದ ಆಯ್ದ ಭಾಗಗಳ ಪ್ರಕಾರ, ಹಸೀನಾ ಅವರು ‘ಜನರು ನನ್ನೊಂದಿಗೆ ಇರುವ ವಿಶ್ವಾಸವಿದೆ. ಜನರೇ ನನ್ನ ಶಕ್ತಿ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ನನ್ನನ್ನು ಅಧಿಕಾರದಿಂದ ಇಳಿಸುವುದು ಅಷ್ಟು ಸುಲಭವಲ್ಲ. ಇರುವ ಒಂದೇ ಆಯ್ಕೆ ಎಂದರೆ, ನನ್ನನ್ನು ಮುಗಿಸುವುದು. ನನ್ನ ಜನರಿಗಾಗಿ ನಾನು ಸಾಯಲೂ ಸಿದ್ಧ’ ಎಂದು ‘ಟೈಮ್’ ನಿಯತಕಾಲಿಕೆಗೆ ತಿಳಿಸಿದ್ದಾರೆ.

ನವೆಂಬರ್ 20ರ ಆವೃತ್ತಿಯ ಮುಖಪುಟದಲ್ಲಿ ಹಸೀನಾ ಅವರ ಚಿತ್ರ ಪ್ರಕಟವಾಗಿದೆ. ಇದು ನ.10ರಂದೇ ಓದುಗರ ಕೈಸೇರಲಿದೆ ಎಂದು ನ್ಯೂಯಾರ್ಕ್ ಮೂಲದ ಪತ್ರಿಕೆ ‘ಟೈಮ್‌’ ತಿಳಿಸಿದೆ.

‘ಮಾರ್ಗರೇಟ್ ಥ್ಯಾಚರ್, ಇಂದಿರಾ ಗಾಂಧಿ ಅವರಿಗಿಂತ ಹೆಚ್ಚು ಬಾರಿ ಚುನಾವಣೆಗಳನ್ನು ಗೆದ್ದಿರುವ ಹಸೀನಾ, ಬರುವ ಜನವರಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಗೆಲುವಿನ ಓಟ ಮುಂದುವರಿಸಲು ನಿರ್ಧರಿಸಿದ್ದಾರೆ’ ಎಂದು ‘ಟೈಮ್‌’ನ ಮುಖಪುಟದ ‘ಶೇಖ್ ಹಸೀನಾ ಮತ್ತು ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಭವಿಷ್ಯ’ ಶೀರ್ಷಿಕೆಯ ವರದಿಯಲ್ಲಿ ಚಾರ್ಲಿ ಕ್ಯಾಂಪ್‌ಬೆಲ್‌ ಬರೆದಿದ್ದಾರೆ. 

ಈ ‘ಕವರ್‌ ಸ್ಟೋರಿ’ ಪ್ರಕಾರ, ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಆಡಳಿತದಲ್ಲಿ ರಾಷ್ಟ್ರವು ಸರ್ವಾಧಿಕಾರಿ ತಿರುವು ಪಡೆದುಕೊಂಡಿದೆ. ಕಳೆದ ಎರಡು ಚುನಾವಣೆಗಳಲ್ಲಿ ನಡೆದಿರುವ ಪ್ರಮುಖ ಅಕ್ರಮಗಳನ್ನು ಅಮೆರಿಕ ಮತ್ತು ಯುರೋಪ್‌ ಒಕ್ಕೂಟವು ಖಂಡಿಸಿದೆ.

ಹಸೀನಾ ಅವರ ಹತ್ಯೆಗೆ ಇದುವರೆಗೆ 19 ಬಾರಿ ಪ್ರಯತ್ನಗಳು ನಡೆದಿರುವುದು, ಪಾರದರ್ಶಕ ಚುನಾವಣೆಗಾಗಿ ಪಕ್ಷಾತೀತ ಸರ್ಕಾರ ರಚನೆಗೆ ಒತ್ತಾಯಿಸಿ ವಿಪಕ್ಷ (ಬಿಎನ್‌ಪಿ) ನಡೆಸುತ್ತಿರುವ ರ‍್ಯಾಲಿ ಮತ್ತು ಇದಕ್ಕೆ ಆಡಳಿತಾರೂಢ ಅವಾಮಿ ಲೀಗ್‌ ಪಾರ್ಟಿ ನಡೆಸುತ್ತಿರುವ ಪ್ರತಿ ರ‍್ಯಾಲಿ ಘರ್ಷಣೆಗೆ ತಿರುಗಿ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಬಗ್ಗೆಯೂ ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. 

ಬಾಂಗ್ಲಾದೇಶದಲ್ಲಿ 2024ರ ಜನವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT