ಬ್ಯಾಂಕಾಕ್ (ಎಪಿ): ಮ್ಯಾನ್ಮಾರ್ನ ರಾಜಕೀಯ ಕೈದಿಗಳನ್ನು ಬಂಧಿಸಿ ಇಟ್ಟಂತಹ ಯಾಂಗೋನ್ನಲ್ಲಿನ ಇನ್ಸೈನ್ ಕಾರಾಗೃಹದ ಮುಂಭಾಗ ಬುಧವಾರ ಬೆಳಿಗ್ಗೆ ಬಾಂಬ್ಗಳು ಸ್ಫೋಟಗೊಂಡಿದ್ದು, ಸಂದರ್ಶಕರು ಹಾಗೂ ಕಾರಾಗೃಹದ ಸಿಬ್ಬಂದಿ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಾಗತ ಕಚೇರಿ ಬಳಿ ಎರಡು ಬಾಂಬ್ಗಳನ್ನು ಸ್ಫೋಟಿಸಲಾಗಿದೆ. ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಪಾರ್ಸೆಲ್ ಒಂದರಲ್ಲಿ ಸ್ಫೋಟಗೊಳ್ಳದೆ ಉಳಿದಿದ್ದ ಬಾಂಬೊಂದು ಪತ್ತೆಯಾಗಿದೆ ಎಂದುಮಿಲಿಟರಿ ಮಾಹಿತಿ ಕಚೇರಿ ತಿಳಿಸಿದೆ.