ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌: ಯಥಾಸ್ಥಿತಿ ಬದಲಿಸದಂತೆ ಚೀನಾಕ್ಕೆ ಬ್ಲಿಂಕೆನ್‌ ಎಚ್ಚರಿಕೆ

Last Updated 21 ಜನವರಿ 2023, 12:35 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ತೈವಾನ್‌ಗೆ ಸಂಬಂಧಿಸಿದ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಯಥಾಸ್ಥಿತಿಯನ್ನು ಬದಲಾಯಿಸಲು ಯತ್ನಿಸದಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಅವರು ಚೀನಾಕ್ಕೆ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ಚಿಕಾಗೋ ವಿಶ್ವವಿದ್ಯಾಲಯದ ‘ಇನ್‌ಸ್ಟಿಟ್ಯೂಟ್‌ ಆಫ್‌ ಪಾಲಿಟಿಕ್ಸ್‌’ನ ಸ್ಥಾಪಕ ನಿರ್ದೇಶಕ ಡೇವಿಡ್ ಆಕ್ಸೆಲ್ರಾಡ್ ಅವರೊಂದಿಗಿನ ಸಂವಾದದ ವೇಳೆ ಬ್ಲಿಂಕೆನ್‌ ಈ ಎಚ್ಚರಿಕೆ ನೀಡಿದ್ದಾರೆ.

‘ಕಳೆದ ಹಲವು ವರ್ಷಗಳಿಂದಲೂ ತೈವಾನ್‌ ಮೇಲೆ ಚೀನಾ ಮಿಲಿಟರಿ ಹಾಗೂ ಆರ್ಥಿಕ ಒತ್ತಡ ಹೇರಲು ಯತ್ನಿಸುತ್ತಿದೆ’ ಎಂದಿದ್ದಾರೆ.

‘ಜಗತ್ತಿನ ಶೇ 50ರಷ್ಟು ಸರಕು ಸಾಗಣೆ ಹಡಗುಗಳು ತೈವಾನ್‌ ಜಲಸಂಧಿ ಮೂಲಕ ಸಂಚರಿಸುತ್ತವೆ. ವಿಶ್ವದಲ್ಲಿ ಬಳಕೆಯಾಗುತ್ತಿರುವ ಕಂಪ್ಯೂಟರ್‌ ಚಿಪ್‌ಗಳ ಪೈಕಿ, ಶೇ 70ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ಚಿಪ್‌ಗಳನ್ನು ತೈವಾನ್‌ ಉತ್ಪಾದಿಸುತ್ತದೆ. ಒಂದು ವೇಳೆ ತೈವಾನ್‌ನ ಯಥಾಸ್ಥಿತಿಗೆ ಅಡ್ಡಿಪಡಿಸಿದರೆ ಜಾಗತಿಕ ಆರ್ಥಿಕತೆಯೇ ಬಳಲಬೇಕಾಗುತ್ತದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT