ಲಂಡನ್: ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳಿರುವ ದೇಶಗಳ ‘ಕೆಂಪು ಪಟ್ಟಿಗೆ’ ಭಾರತವನ್ನು ಸೇರಿಸಿರುವ ಬ್ರಿಟನ್ ದೇಶವು ಹೆಚ್ಚುವರಿ ವಿಮಾನ ಸಂಚಾರ ಮನವಿಯನ್ನು ತಿರಸ್ಕರಿಸಿದೆ. ಭಾರತದಿಂದ ಹೆಚ್ಚುವರಿ ವಿಮಾನಗಳನ್ನು ಅನುಮತಿಸಲು ನಿರಾಕರಿಸಲಾಗಿದೆ ಎಂದು ಹೀಥ್ರೂ ಏರ್‌ಪೋರ್ಟ್ ತಿಳಿಸಿದೆ.

ಭಾರತದಲ್ಲಿ ಮೊದಲು ಗುರುತಿಸಲಾದ ಕೊರೊನಾ ವೈರಸ್ ರೂಪಾಂತರದ 100 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದ ಬಳಿಕ ಬ್ರಿಟನ್ ಈ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ಹೇಳಿದ್ದರು.

‘ನಾವು ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿರುವುದು ಕಠಿಣ ನಿರ್ಧಾರ. ಆದರೆ, ಇದು ಮಹತ್ವದ ನಿರ್ಧಾರವಾಗಿದೆ. ಇದರರ್ಥ ಯುಕೆ, ಐರಿಶ್ ನಿವಾಸಿ ಅಥವಾ ಬ್ರಿಟಿಷ್ ಪ್ರಜೆಯಲ್ಲದವರು ಹಿಂದಿನ 10 ದಿನಗಳಲ್ಲಿ ಭಾರತದಲ್ಲಿದ್ದರೆ ಯುಕೆಗೆ ಪ್ರವೇಶಿಸಲು ಸಾಧ್ಯವಿಲ್ಲ,’ ಎಂದು ಹ್ಯಾನ್ಕಾಕ್ ಸಂಸತ್ತಿನಲ್ಲಿ ತಿಳಿಸಿದ್ದರು.

ಭಾರತದಿಂದ ಹೆಚ್ಚುವರಿ ವಿಮಾನಗಳನ್ನು ಅನುಮತಿಸಲು ಹೀಥ್ರೂ ವಿಮಾನ ನಿಲ್ದಾಣವು ನಿರಾಕರಿಸಿದೆ ಎಂದು ಬಿಬಿಸಿ ಈ ಹಿಂದೆ ವರದಿ ಮಾಡಿತ್ತು, ಪಾಸ್‌ಪೋರ್ಟ್ ನಿಯಂತ್ರಣದಲ್ಲಿ ಸರತಿ ಸಾಲುಗಳ ಬಗ್ಗೆ ಇರುವ ಆತಂಕದಿಂದಾಗಿ ವಿಮಾನಯಾನ ಸಂಸ್ಥೆಗಳ ಕೋರಿಕೆಗಳನ್ನು ತಿರಸ್ಕರಿಸಲಾಗಿದೆ ಎಂದು ವಿಮಾನ ನಿಲ್ದಾಣ ತಿಳಿಸಿದೆ.

ಮತ್ತಷ್ಟು ಪ್ರಯಾಣಿಕರ ಆಗಮನಕ್ಕೆ ಅವಕಾಶ ನೀಡುವ ಮೂಲಕ ಅಸ್ತಿತ್ವದಲ್ಲಿರುವ ಒತ್ತಡಗಳನ್ನು ಹೆಚ್ಚಿಸಲು ನಾವು ಬಯಸುವುದಿಲ್ಲ ಎಂದು ಹೀಥ್ರೂ ವಿಮಾನ ನಿಲ್ದಾಣದ ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.