ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್‌ಗಳಲ್ಲಿ ತಾಂತ್ರಿಕ ದೋಷ: ವಿಮಾನ‌ ಸಂಚಾರ ರದ್ದು

Published 26 ಮೇ 2023, 14:01 IST
Last Updated 26 ಮೇ 2023, 14:01 IST
ಅಕ್ಷರ ಗಾತ್ರ

ಲಂಡನ್‌: ಕಂಪ್ಯೂಟರ್‌ಗಳಲ್ಲಿ ಕಾಣಿಸಿಕೊಂಡ ದೋಷದ ಕಾರಣ ಬ್ರಿಟಿಷ್‌ ವಿಮಾನಯಾನ ಸಂಸ್ಥೆಯ ಹಲವು ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಯಿತು 

ಕಂಪ್ಯೂಟರ್‌ಗಳಲ್ಲಿ ಗುರುವಾರದಿಂದ ದೋಷ ಕಾಣಿಸಿಕೊಂಡಿದೆ. ಯುರೋಪ್‌ನಲ್ಲಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿರುವ ಹೀಥ್ರೂ ವಿಮಾನ ನಿಲ್ದಾಣದಿಂದ ನಿರ್ಗಮಿಸುವ/ಆಗಮಿಸುವ ಅಲ್ಪಅಂತರದ ಸುಮಾರು 42 ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಯಿತು. 

ಪ್ರಯಾಣಿಕರಿಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಯು ಸಾಧ್ಯವಾಗದ ಕಾರಣ ಇತರ ವಿಮಾನಗಳೂ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಹಾರಾಟ ಆರಂಭಿಸಿದವು.

‘ತಾಂತ್ರಿಕ ದೋಷ ಸರಿಪಡಿಸಲಾಗುತ್ತಿದೆ’ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT