ಲಂಡನ್: ಭಾರತದಲ್ಲಿ ಕೋವಿಡ್ ತೀವ್ರವಾಗಿ ಹಬ್ಬುತ್ತಿರುವ ಕಾರಣ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಮುಂದಿನ ವಾರದ ಭಾರತ ಭೇಟಿ ರದ್ದಾಗಿದೆ.

‘ಈ ತಿಂಗಳ ಕೊನೆಯಲ್ಲಿ ಭಾರತ–ಬ್ರಿಟನ್‌ನ ಮಹತ್ವಕಾಂಕ್ಷಿ ಪಾಲುದಾರಿಕೆಯ ಬಗ್ಗೆ ಬೋರಿಸ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅದಲ್ಲದೆ ಉಭಯ ರಾಷ್ಟ್ರಗಳು ನಿರಂತರ ಸಂಪರ್ಕದಲ್ಲಿ ಇರಲಿವೆ. ಈ ವರ್ಷದ ಅಂತ್ಯದಲ್ಲಿ ನಾಯಕರು ವೈಯಕ್ತಿಕವಾಗಿ ಭೇಟಿಯಾಗುವ ನಿರೀಕ್ಷೆಯಲ್ಲಿದ್ದಾರೆ’ ಎಂದು ಬ್ರಿಟಿಷ್ ಮತ್ತು ಭಾರತ ಸರ್ಕಾರಗಳ ಪರವಾಗಿ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಭಾರತದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತದ ಭೇಟಿಯನ್ನು ರದ್ದುಗೊಳಿಸಬೇಕು. ಬದಲಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಬೇಕು’ ಎಂಬ ಬ್ರಿಟನ್‌ನ ವಿರೋಧ ಪಕ್ಷ ಒತ್ತಾಯಿಸಿತ್ತು.

ಪ್ರಧಾನಿ ಬೋರಿಸ್ ಜಾನ್ಸನ್ ಅವರು ಏ. 26ರಂದು ಭಾರತಕ್ಕೆ ಭೇಟಿ ನೀಡಬೇಕಾಗಿತ್ತು. ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್‌ನಲ್ಲೂ ಅವರು ಮುಖ್ಯ ಅತಿಥಿಯಾಗಬೇಕಿತ್ತು. ಆಗ ಅವರು ಬ್ರಿಟನ್‌ನಲ್ಲಿ ಕೋವಿಡ್ ಪ್ರಕರಣ ಜಾಸ್ತಿ ಇದ್ದ ಕಾರಣ ಭೇಟಿಯನ್ನು ರದ್ದುಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.