ಕೊಲಂಬೊ: ಎಲ್ಟಿಟಿಇ ಮತ್ತು ಶ್ರೀಲಂಕಾ ಸೇನೆ ಮಧ್ಯೆ ನಡೆದ ಸುದೀರ್ಘ ಸಂಘರ್ಷದಲ್ಲಿ ಸಾವಿರಾರು ಮಂದಿ ಕಾಣೆಯಾಗಿದ್ದರು. ಚೆಮ್ಮಾನಿ ಎಂಬಲ್ಲಿ ಸಾಮೂಹಿಕವಾಗಿ ಹೆಣಗಳನ್ನು ಹೂತು ಹಾಕಲಾಗಿದೆ ಎಂದು 1998ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು. ಈಗ ಇದೇ ಜಾಗದಲ್ಲಿ ನಾಲ್ಕು ಅಥವಾ ಐದು ವರ್ಷದ ಹೆಣ್ಣು ಮಗು ಸೇರಿ 65 ಮನುಷ್ಯರ ಅಸ್ಥಿಪಂಜರಗಳು ಪತ್ತೆಯಾಗಿವೆ.

ಚಿಮ್ಮಾನಿ ಎಂಬ ಜಾಗವು ಜಾಫ್ನಾ ಜಿಲ್ಲೆಯಲ್ಲಿದೆ. ಈ ಜಾಗದಲ್ಲಿ ಇತ್ತೀಚೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ಈ ವೇಳೆ ಕೆಲವು ಮನುಷ್ಯನ ಅಸ್ಥಿಪಂಜರಗಳು ಪತ್ತೆಯಾದವು. ಈ ಬಳಿಕ ನ್ಯಾಯಾಲಯವು, ‘ಈ ಜಾಗದಲ್ಲಿ ಅಸ್ಥಿಪಂಜರಗಳನ್ನು ಹೊರತೆಗೆಯುವ ಕಾರ್ಯ ಆರಂಭಿಸಬೇಕು’ ಎಂದು ಆದೇಶ ನೀಡಿತ್ತು.

‘1999ರಲ್ಲಿ ಇಂಥದ್ದೆ ಕಾರ್ಯ ನಡೆಸಲಾಗಿತ್ತು. ಆ ವೇಳೆ 15 ಅಸ್ಥಿಪಂಜರಗಳು ದೊರೆತಿದ್ದವು. ಆ ಬಳಿಕ ಈ ಪ್ರಕರಣ ಸಂಬಂಧ ಯಾವುದೇ ಪ್ರಗತಿ ಆಗಿರಲಿಲ್ಲ. ಈಗ ಹೆಣ್ಣು ಮಗುವೊಂದರ ಅಸ್ಥಿಪಂಜರ ದೊರೆತಿದ್ದು, ಶಾಲಾ ಬ್ಯಾಗ್ ಮತ್ತು ಆಟಿಕೆಗಳೂ ದೊರೆತಿವೆ’ ಎಂದು ವಕೀಲರೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.