ಮಾಸ್ಕೊ: ರಷ್ಯಾದ ಕೇಂದ್ರ ಭಾಗದಲ್ಲಿ ಭಾನುವಾರ ಭಾರಿ ಬಿರುಗಾಳಿ ಕಾಣಿಸಿಕೊಂಡಿದ್ದು, ಪ್ರವಾಸಿಗಳ ಶಿಬಿರವೊಂದರಲ್ಲಿ ಮೂವರು ಮಕ್ಕಳು ಸೇರಿ ಒಂಭತ್ತು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾಲ್‌ಚಿಕ್ ಸರೋವರದ ಸಮೀಪದಲ್ಲಿ ಈ ಪ್ರವಾಸಿಗಳು ನೆಲೆಯೂರಿದ್ದರು. ಅಲ್ಲದೆ, ಬಿರುಗಾಳಿಯಿಂದಾಗಿ ಹಲವೆಡೆ ಮರಗಳು ಉರುಳಿವೆ ಎಂದು ಪ್ರಾದೇಶಿಕ ವಲಯದ ನಾಯಕ ಯೂರಿ ಜೈಟ್‌ಸೆವ್ ಅವರು ಜಾಲತಾಣದಲ್ಲಿ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ.
ಉಳಿದಂತೆ, ವೊಲ್ಗಾ ಫೆಡರಲ್ ಜಿಲ್ಲೆಯಲ್ಲಿ ಬಿರುಗಾಳಿ ಸಂಬಂಧಿತ ಅವಘಡಗಳಿಂದ ಒಟ್ಟು 76 ಜನರು ಗಾಯಗೊಂಡಿದ್ದಾರೆ. ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ತುರ್ತು ಸೇವೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.