ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್: ಉಯಿಘರ್ ಮುಸ್ಲಿಂ ಸಮುದಾಯದ ನಮಾಜ್‌ಗೆ ಚೀನಾ ನಿರ್ಬಂಧ

Published 28 ಏಪ್ರಿಲ್ 2023, 13:27 IST
Last Updated 28 ಏಪ್ರಿಲ್ 2023, 13:27 IST
ಅಕ್ಷರ ಗಾತ್ರ

ನವದೆಹಲಿ: ಷಿಂಜಿಯಾಂಗ್‌ ಪ್ರದೇಶದ ಹಲವು ಭಾಗಗಳಲ್ಲಿ ರಂಜಾನ್ ಮಾಸದ ಅಂತ್ಯದಲ್ಲಿ ಬರುವ ಈದ್–ಉಲ್–ಫಿತರ್ ರಜಾ ದಿನಗಳಲ್ಲಿ ಉಯಿಘರ್ ಮುಸಲ್ಮಾನ ಸಮುದಾಯವು ಮಸೀದಿ ಅಲ್ಲದೆ, ಮನೆಗಳಲ್ಲೂ ನಮಾಜ್‌ ಮಾಡುವುದನ್ನು ಚೀನಾದ ಅಧಿಕಾರಿಗಳು ನಿರ್ಬಂಧಿಸಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ತಿಳಿಸಿವೆ.

ಆದರೆ, ಪೊಲೀಸರ ಬಿಗಿ ಕಣ್ಗಾವಲಿನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸ್ಥಳೀಯ ಮಸೀದಿಯಲ್ಲಿ ನಮಾಜು ಮಾಡಲು ಅವಕಾಶ ನೀಡಲಾಗಿದೆ ಎಂದು ‘ರೇಡಿಯೊ ಫ್ರೀ ಏಷ್ಯಾ’ ವರದಿ ನೀಡಿದೆ.

2017ರಿಂದ ಚೀನಾವು ’ಧಾರ್ಮಿಕ ಉಗ್ರವಾದ’ ಹತ್ತಿಕ್ಕುವುದರ ಜೊತೆಗೆ ನಿಯಂತ್ರಿಸುತ್ತಿದೆ. ಹೆಚ್ಚಾಗಿ ಉಯಿಘರ್ ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸಿದೆ ಎಂದು ವರದಿ ಉಲ್ಲೇಖಿಸಿದೆ.

ಚೀನಾದ ಬುಲುಂಗ್ ಪ್ರದೇಶದಲ್ಲಿ ಒಂದೇ ಮಸೀದಿಯಿದ್ದು, ಅಲ್ಲಿ 60 ವರ್ಷ ಮೇಲ್ಪಟ್ಟ ಮೂವರು ಮಾತ್ರ ನಮಾಜು ಮಾಡಿದರು. ಈ ಸಂದರ್ಭ ಕಣ್ಗಾವಲಿಗೆ ಮೂವರು ಪೊಲೀಸ್ ಅಧಿಕಾರಿಗಳು ಹಾಜರಿದ್ದು, ನಮಾಜು ಮಾಡಿದವರ ಹೆಸರನ್ನು ಗುರುತು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT