ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲೈಲಾಮಾ ಜನ್ಮದಿನಕ್ಕೆ ಮೋದಿ ಶುಭಾಶಯ: ಚೀನಾ ತಕರಾರು

Last Updated 7 ಜುಲೈ 2022, 14:05 IST
ಅಕ್ಷರ ಗಾತ್ರ

ಬೀಜಿಂಗ್: ಟಿಬೆಟ್‌ ಧಾರ್ಮಿಕ ಗುರು ದಲೈಲಾಮಾ ಅವರಿಗೆ 87ನೇ ಜನ್ಮದಿನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಕ್ಕೆ ಚೀನಾ ತಕರಾರು ತೆಗೆದಿದೆ. ‘ಚೀನಾದ ಆಂತರಿಕ ವ್ಯವಹಾರಗಳಲ್ಲಿಭಾರತ ಹಸ್ತಕ್ಷೇಪ ಮಾಡಬಾರದು‘ ಎಂದು ಹೇಳಿದೆ.

ಪ್ರಧಾನಿ ಮೋದಿ ಬುಧವಾರ ದಲೈಲಾಮಾ ಅವರಿಗೆ ಕರೆ ಮಾಡಿ ಶುಭ ಕೋರಿದ್ದರು. ಈ ಕುರಿತ ಟ್ವೀಟ್‌ನಲ್ಲಿ, ‘ದಲೈಲಾಮಾ ಅವರಿಗೆ ದೀರ್ಘಕಾಲದ ಬದುಕು ಮತ್ತು ಉತ್ತಮ ಆರೋಗ್ಯ ಲಭಿಸಲಿ ಎಂದು ಕೋರುತ್ತೇವೆ’ ಎಂದಿದ್ದರು. ಕಳೆದ ವರ್ಷವೂ ಪ್ರಧಾನಿ ಶುಭಹಾರೈಸಿದ್ದರು.

ದಲೈಲಾಮಾ ಅವರ ಚೀನಾ ವಿರೋಧಿ ಧೋರಣೆಯನ್ನು ಭಾರತ ಬೆಂಬಲಿಸುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜ್ಜನ್‌ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು. ಶುಭ ಕೋರಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಅವರ ನಡೆಯನ್ನೂ ಟೀಕಿಸಿದರು.

‘ದಲೈಲಾಮಾ ಅವರು ರಾಜಕೀಯ ಗಡೀಪಾರಿನಲ್ಲಿ ಇದ್ದಾರೆ. ದೀರ್ಘ ಕಾಲದಿಂದ ಚೀನಾದ ಪ್ರತ್ಯೇಕತಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ’ ಎಂದು ಲಿಜ್ಜನ್‌ ಟೀಕಿಸಿದರು.

ಭಾರತ ಪ್ರತಿಕ್ರಿಯೆ: ದಲೈಲಾಮಾ ಅವರನ್ನು ಧಾರ್ಮಿಕ ಮುಖಂಡ ಎಂದು ಭಾರತ ಪರಿಗಣಿಸುತ್ತದೆ. ಪ್ರಧಾನಿ ಅವರು ಜನ್ಮದಿನದ ಶುಭ ಕೋರಿರುವುದನ್ನು ಅದೇ ಹಿನ್ನೆಲೆಯಲ್ಲಿ ನೋಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT