ಬೀಜಿಂಗ್: ಚೀನಾದಲ್ಲಿ ಕಮ್ಯೂನಿಸ್ಟ್ ಪಕ್ಷದ ಆಡಳಿತವು 75 ವರ್ಷ ಪೂರೈಸಿದೆ. ಭದ್ರತೆ ಹಾಗೂ ಆರ್ಥಿಕ ಸವಾಲುಗಳ ಕಾರಣ ಈ ನಿಮಿತ್ತ ಯಾವುದೇ ಸಮಾರಂಭವನ್ನು ಆಯೋಜಿಸಿರಲಿಲ್ಲ.
ತಿಯಾನ್ಮೆನ್ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಆಡಳಿತದ 60 ಹಾಗೂ 70ನೇ ವರ್ಷಾಚರಣೆ ಸಂದರ್ಭದಲ್ಲಿ ಚೀನಾವು ದೊಡ್ಡ ಪ್ರಮಾಣದಲ್ಲಿ ಸೇನಾ ಕವಾಯತು ನಡೆಸಿತ್ತು.
ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕತೆ ರಾಷ್ಟ್ರವಾದ ಚೀನಾ ಕೋವಿಡ್–19 ಅವಧಿಯ ಬಳಿಕ ಹಿಂದಿನ ವೈಭವಕ್ಕೆ ಮರಳಲು ಹೆಣಗಾಡುತ್ತಿದೆ. ಆರ್ಥಿಕತೆಯ ಚೇತರಿಕೆಗೆ ಬಡ್ಡಿದರ ಇಳಿಕೆ ಸೇರಿ ಹಲವು ಕ್ರಮ ಕೈಗೊಂಡಿದೆ. ಹಲವು ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ.
ಪಕ್ಷದ ನಾಯಕ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು, ‘ಮುಂದಿನ ಹಾದಿ ಸುಗಮವಾಗಿಲ್ಲ. ಸಾಕಷ್ಟು ಅಡೆತಡೆಗಳಿವೆ. ಬಿರುಗಾಳಿ, ಭಾರೀ ಅಲೆಗಳನ್ನು ಎದುರಿಸಬೇಕಾದಿತು‘ ಎಂದಿದ್ದಾರೆ.