ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಯೋಜನೆಗಳ ಅಭಿವೃದ್ಧಿಗಾಗಿ ವಿಯೆಟ್ನಾಂಗೆ ಅನುದಾನ ನೀಡಲು ಸಿದ್ಧ: ಚೀನಾ

Published 11 ಡಿಸೆಂಬರ್ 2023, 2:09 IST
Last Updated 11 ಡಿಸೆಂಬರ್ 2023, 2:09 IST
ಅಕ್ಷರ ಗಾತ್ರ

ಹನೋಯಿ: ವಿಯೆಟ್ನಾಂ ರಾಜಧಾನಿ ಹನೋಯಿಯಿಂದ ಚೀನಾದ ಗುವಾಂಗ್‌ಕ್ಸಿ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆ ಮೇಲ್ದರ್ಜೆಗೇರಿಸುವುದೂ ಸೇರಿದಂತೆ, ಉಭಯ ದೇಶಗಳ ನಡುವೆ ಸಂಪರ್ಕ ಸಾಧಿಸುವ ಇತರರ ಯೋಜನೆಗಳಿಗೆ ಅನುದಾನ ನೀಡಲು ಚೀನಾ ಸಿದ್ಧವಿದೆ ಎಂದು ವಿಯೆಟ್ನಾಂನಲ್ಲಿರುವ ಚೀನಾದ ರಾಯಭಾರಿ ಹೇಳಿದ್ದಾರೆ.

'ಉಭಯ ದೇಶಗಳು ಭೂ, ಸಾಗರ, ವಾಯು ಮತ್ತು ಅಂತರ್ಜಾಲ ಸಂಪರ್ಕವನ್ನು ಪರಸ್ಪರ ಉತ್ತಮಪಡಿಸಿಕೊಳ್ಳಬೇಕಿದೆ' ಎಂದು ರಾಯಭಾರಿ ಕ್ಸಿಯಾಂಗ್‌ ಬೊ ಹೇಳಿರುವುದಾಗಿ ವಿಯೆಟ್ನಾಂ ಮಾಧ್ಯಮಗಳು ವರದಿ ಮಾಡಿವೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಮಂಗಳವಾರ ಹನೋಯಿಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ಕ್ಸಿಯಾಂಗ್‌ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT