ಬೀಜಿಂಗ್: ಪರೀಕ್ಷೆ ಉದ್ದೇಶದ ಹೊಸ ಉಪಗ್ರಹವೊಂದನ್ನು ಚೀನಾ ಯಶಸ್ವಿಯಾಗಿ ಗುರುವಾರ ಉಡಾವಣೆ ಮಾಡಿತು ಎಂದು ಸರ್ಕಾರಿ ಒಡೆತನದ ಮಾಧ್ಯಮವೊಂದು ವರದಿ ಮಾಡಿದೆ.

‘ಶಿಯಾನ್–11’ ಎಂಬ ಉಪಗ್ರಹವನ್ನು ಹೊತ್ತ ‘ಕುವಾಯಿಜೌ–1ಎ’ ರಾಕೆಟ್ ನಭಕ್ಕೆ ಚಿಮ್ಮಿ, ಪೂರ್ವನಿರ್ಧರಿತ ಭೂಕಕ್ಷೆಯಲ್ಲಿ ಅದನ್ನು ಸೇರಿಸಿತು. ಮಂಗೋಲಿಯಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ಈ ಕಾರ್ಯ ನೆರವೇರಿತು ಎಂದು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ (ಸಿಜಿಟಿಎನ್) ವರದಿ ಮಾಡಿದೆ.

‘ಪರೀಕ್ಷೆ ಉದ್ದೇಶಕ್ಕಾಗಿ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ ಎಂದಷ್ಟೆ ಮಾಹಿತಿ ಇದ್ದು, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ’ ಎಂದು ಸಿಜಿಟಿಎನ್ ಹೇಳಿದೆ.

ಇದೇ ಸರಣಿಯ ಶಿಯಾನ್–10 ಉಪಗ್ರಹವನ್ನು ಕೆಲ ದಿನಗಳ ಹಿಂದೆ ಉಡಾವಣೆ ಮಾಡಲಾಗಿತ್ತು. ಯಶಸ್ವಿಯಾಗಿ ನಿರ್ದಿಷ್ಟ ಕಕ್ಷೆಗೆ ಸೇರಿಸಲಾಗಿದ್ದರೂ, ತನ್ನ ನಿಗದಿತ ಕಾರ್ಯ ಮಾಡುವಲ್ಲಿ ವಿಫಲವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.