ಕಳೆದ ತಿಂಗಳು ಕ್ಸಿನ್ಜಿಯಾಂಗ್ನ ರಾಜಧಾನಿ ಉರುಮ್ಕಿಯಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಸಂತ್ರಸ್ತರು ತಪ್ಪಿಸಿಕೊಳ್ಳಲಾಗಲಿಲ್ಲ. ಇದಕ್ಕೆಕಠಿಣ ಕೋವಿಡ್ ನಿರ್ಬಂಧ ಹಾಗೂ ಲಾಕ್ಡೌನ್ ಕಾರಣ ಎಂದು ಸಾರ್ವಜನಿಕರು ಪ್ರತಿಭಟನೆ ಆರಂಭಿಸಿದ್ದರು.ಈಗ ಆ ಪ್ರದೇಶದಲ್ಲಿನ ಮಾಲ್, ಮಾರುಕಟ್ಟೆ, ರೆಸ್ಟೋರೆಂಟ್ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ತೆರೆಯಲಾಗಿದ್ದು, ತಿಂಗಳಿದ್ದ ಇದ್ದ ಕಟ್ಟುನಿಟ್ಟಿನ ಲಾಕ್ಡೌನ್ಗೆ ಅಂತ್ಯ ಹಾಡಲಾಗಿದೆ. ಉರುಮ್ಕಿ ಮಾತ್ರವಲ್ಲದೇ, ಜೆನ್ಜಾಹೊ, ಶಾಂಘೈ ಸೇರಿದಂತೆಚೀನಾದ ಬಹಳಷ್ಟು ನಗರಗಳಲ್ಲಿ ಲಾಕ್ಡೌನ್, ಕ್ವಾರಂಟೈನ್ ಹಾಗೂ ಕರೋನಾ ಪರೀಕ್ಷೆಗಳನ್ನು ಕೈ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.