ವಿಶ್ವಸಂಸ್ಥೆ: ಕೊರೊನಾ ಸೋಂಕಿನ ದೀರ್ಘಕಾಲೀನ ಪ್ರಭಾವದಿಂದ 2030ರ ವೇಳೆಗೆ ಹೆಚ್ಚುವರಿಯಾಗಿ 20.7 ಕೋಟಿ ಜನರನ್ನು ತೀವ್ರ ಬಡತನಕ್ಕೆ ತಳ್ಳಬಹುದು. ಈ ಮೂಲಕ ವಿಶ್ವದ ಅತ್ಯಂತ ಬಡವರ ಸಂಖ್ಯೆ ಒಂದು ಶತಕೋಟಿಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ(ಯುನ್‌ಡಿಪಿ) ಹೊಸ ಅಧ್ಯಯನವೊಂದರಲ್ಲಿ ತಿಳಿದುಬಂದಿದೆ.

ಮುಂದಿನ ದಶಕದಲ್ಲಿ ಸಾಂಕ್ರಾಮಿಕ ರೋಗದ ಬಹು ಆಯಾಮದ ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ. ಈ ಅಧ್ಯಯನವನ್ನು ಯುಎನ್‌ಡಿಪಿ ಮತ್ತು ಡೆನ್ವರ್ ವಿಶ್ವವಿದ್ಯಾಲಯದ ’ಪಾರ್ಡಿ ಸೆಂಟರ್ ಫಾರ್ ಇಂಟರ್‌ನ್ಯಾಷನಲ್ ಫ್ಯೂಚರ್ಸ್’ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿದೆ.

ಕೋವಿಡ್‌ನಿಂದಾಗಿ ಉಂಟಾಗಿರುವ ಶೇಕಡ 80 ರಷ್ಟು ಆರ್ಥಿಕ ಬಿಕ್ಕಟ್ಟು 10 ವರ್ಷಗಳ ಕಾಲ ಮುಂದುವರಿಯಲಿದೆ ಎಂದು ಅಧ್ಯಯನವು ಹೇಳಿದೆ.

ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು, ಆಡಳಿತ, ಡಿಜಿಟಲೀಕರಣ, ಹಸಿರು ಆರ್ಥಿಕತೆಯಲ್ಲಿ ಸುಸ್ಥಿತ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧಿಸುವ ಮೂಲಕ ತೀವ್ರ ಬಡತನ ಹೆಚ್ಚಾಗುವುದನ್ನು ತಡೆಯಬಹುದು. ಅಲ್ಲದೆ ಅಭಿವೃದ್ಧಿ ಪಥವನ್ನು ಮೊದಲಿನಂತೆ ದಾರಿಗೆ ತರಬಹುದು ಎಂದು ಅಧ್ಯಯನ ವರದಿಯಲ್ಲಿ ಸಲಹೆ ನೀಡಲಾಗಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸದೃಢಗೊಳಿಸುವ ಮೂಲಕ 14.6 ಕೋಟಿ ಜನರನ್ನು ತೀವ್ರ ಬಡತನದಿಂದ ರಕ್ಷಿಸಬಹುದು ಎಂದು ಅಧ್ಯಯನ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.