ವಾಷಿಂಗ್ಟನ್: ಭಾರತ ಮತ್ತು ಅಲ್ಲಿನ ಜನರ ಪರವಾಗಿ ಇಂದು ಇಡೀ ವಿಶ್ವವೇ ಪ್ರಾರ್ಥಿಸುತ್ತಿದೆ ಎಂದು ಅಮೆರಿಕದ ನಾಗರಿಕ ಹಕ್ಕು ರಕ್ಷಣೆಯ ನಾಯಕ ರೆವೆರೆಂಡ್ ಜೆಸ್ಸಿ ಜಾಕ್ಸನ್ ಹೇಳಿದ್ದಾರೆ.

ಮಹಾತ್ಮಗಾಂಧಿ ನೆಲೆಸಿದ್ದ ನಾಡು ಕೋವಿಡ್ ವಿರುದ್ಧದ ಸವಾಲನ್ನು ಸಮರ್ಥವಾಗಿ ನಿಭಾಯಿಸಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ಆಸ್ಟ್ರಾಜೆನಿಕಾ ಲಸಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಸಬೇಕು ಎಂದು ಅಮೆರಿಕ ಅಧ್ಯಕ್ಷ ಬೈಡನ್ ಅವರನ್ನು ಒತ್ತಾಯಿಸಿದರು. ಈ ಮಧ್ಯೆ ಅಮೆರಿಕ ಸಂಸದೀಯ ಸಮಿತಿಯು ಭಾರತವನ್ನು ಬೆಂಬಲಿಸುವ ಸರ್ವಾನುಮತದಿಂದ ನಿರ್ಣಯವೊಂದನ್ನು ಅಂಗೀಕರಿಸಿದೆ. ಅಲ್ಲದೆ ಭಾರತಕ್ಕೆ ವೈದ್ಯಕೀಯ ನೆರವು ನೀಡಬೇಕು ಎಂದು ಅಧ್ಯಕ್ಷರಿಗೆ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.