ಬೆಂಗಳೂರು: ಬಾಲಭವನದ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸ್ಕೇಟ್ ಬೋರ್ಡಿಂಗ್ ಪಾರ್ಕ್ ನಿರ್ಮಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಿದ್ದತೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2026ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸ್ಕೇಟ್ ಬೋರ್ಡ್ ಲೋಕಾರ್ಪಣೆಯಾಗಲಿದೆ.

ಜವಾಹರ ಬಾಲಭವನ ಸೊಸೈಟಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ ಕಬ್ಬನ್ ಉದ್ಯಾನದ ಬಾಲಭವನದಲ್ಲಿ ಸುಮಾರು ₹1.5 ಕೋಟಿ ವೆಚ್ಚದಲ್ಲಿ ಸ್ಕೇಟ್ ಬೋರ್ಡಿಂಗ್ ಪಾರ್ಕ್ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ.

ಬೆಂಗಳೂರು ನಗರದ ಹೊರ ಭಾಗದಲ್ಲಿ ಹಲವು ಸ್ಕೇಟ್ ಬೋರ್ಡಿಂಗ್ ಪಾರ್ಕ್ಗಳಿವೆ. ಆದರೆ, ಸಾರಿಗೆ ಸಂಪರ್ಕ ಸರಿಯಾಗಿಲ್ಲ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಬಾಲಭವನಕ್ಕೆ ಮೆಟ್ರೊ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಚೆನ್ನಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಇಲ್ಲಿಗೆ ಬರುವ ನಿರೀಕ್ಷೆ ಇದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಾಲಭವನದ ಅಧಿಕಾರಿಗಳು ತಿಳಿಸಿದರು.

‘ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸ್ಕೇಟ್ ಬೋರ್ಡಿಂಗ್ ವಿಭಾಗದಲ್ಲಿ ಭಾಗವಹಿಸುವ ಅಥ್ಲೀಟ್ಗಳನ್ನು ಸಜ್ಜಗೊಳಿಸಲು ಈ ಪಾರ್ಕ್ ಸಹಕಾರಿ ಆಗಲಿದೆ. ಇಲ್ಲಿ ಸ್ಟ್ರೀಟ್ ಹಾಗೂ ಪಾರ್ಕ್ ಎಂಬ ಎರಡು ವಿಭಾಗಗಳು ಇರಲಿವೆ. ಸಾಮಾನ್ಯವಾಗಿ ಈ ಎರಡು ವಿಭಾಗಗಳನ್ನು ಬೇರೆ–ಬೇರೆಯಾಗಿ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿ ಜಾಗದ ಕೊರತೆ ಇರುವ ಕಾರಣ ಹೈಬ್ರಿಡ್ ಮಾದರಿಯ ಸ್ಕೇಟ್ ಬೋರ್ಡಿಂಗ್ ಪಾರ್ಕ್ ನಿರ್ಮಿಸಲಾಗುತ್ತಿದೆ’ ಎಂದು ಜವಾಹರ್ ಬಾಲಭವನ ಸೊಸೈಟಿಯ ಅಧ್ಯಕ್ಷ ಬಿ.ಆರ್. ನಾಯ್ಡು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಕೇಟ್ ಬೋರ್ಡಿಂಗ್ ಪಾರ್ಕ್ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಲಾಗುತ್ತದೆ. ಸ್ಕೇಟ್ ಬೋರ್ಡಿಂಗ್ ಕಲಿಯಲು ಬೇಕಾದ ಎಲ್ಲ ರೀತಿಯ ತರಬೇತಿಯನ್ನು ನೀಡಲಾಗುತ್ತದೆ. ಆನ್ಲೈನ್ ಹಾಗೂ ಆಫ್ಲೈನ್ ಮಾದರಿಯಲ್ಲಿ ತರಬೇತಿ ನೀಡಲಾಗುವುದು. ಇದಕ್ಕೆ ಪ್ರತ್ಯೇಕವಾಗಿ ಶುಲ್ಕ ಇರಲಿದೆ. ನಮ್ಮ ರಾಜ್ಯದಿಂದ ಅಂತರರಾಷ್ಟ್ರೀಯ ಗುಣಮಟ್ಟದ ಸ್ಕೇಟ್ ಬೋರ್ಡಿಂಗ್ ತಂಡ ತಯಾರಿಸುವ ಉದ್ದೇಶ ಇದೆ’ ಎಂದು ವಿವರಿಸಿದರು.

‘ಈ ಪಾರ್ಕ್ಗೆ ನಾಲ್ಕು ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಭೇಟಿ ನೀಡಬಹುದು. ಸ್ಕೇಟ್ ಬೋರ್ಡ್ ಇರುವವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತದೆ. ಈ ಆಟದ ಬಗ್ಗೆ ಗೊತ್ತಿಲ್ಲದವರಿಗೆ ತರಬೇತಿ ನೀಡಲಾಗುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ತರಬೇತಿ ಇರಲಿದೆ. ಉಳಿದ ಸಮಯದಲ್ಲಿ ಆಸಕ್ತರು ಇಲ್ಲಿಗೆ ಬಂದು ಸ್ಕೇಟ್ ಬೋರ್ಡ್ ಆಡಬಹುದು’ ಎಂದರು.

‘ಹೈಬ್ರಿಡ್ ಮಾದರಿಯ ಸ್ಕೇಟ್ ಪಾರ್ಕ್’

‘ಬಾಲಭವನದಲ್ಲಿ ಹೈಬ್ರಿಡ್ ಮಾದರಿಯ ಸ್ಕೇಟ್ ಬೋರ್ಡಿಂಗ್ ನಿರ್ಮಿಸಲಾಗುತ್ತಿದೆ. ಇದರಲ್ಲಿ ಪಾರ್ಕ್ ವಿಭಾಗದಲ್ಲಿ ಹಾಫ್–ಕ್ವಾಟರ್ ಪೈಪ್ ಲೆಡ್ಜ್ ಫನ್ ಬಾಕ್ಸ್ ಬೌಲ್ಸ್ ಮತ್ತು ಸ್ನೇಕ್ ರನ್ಗಳ ಜೊತೆಗೆ ಖಾಲಿ ಈಜುಕೊಳದ ಮಾದರಿ ಇರಲಿದ್ದು ಕಡಿದಾದ ಬದಿಗಳನ್ನು ಹೊಂದಿರುತ್ತದೆ. ಇಲ್ಲಿ ಸ್ಕೇಟರ್ಗಳು ಗ್ರ್ಯಾಬ್ ಮತ್ತು ಸ್ಪಿನ್ ಮಾಡುತ್ತಾರೆ. ಸ್ಟ್ರೀಟ್ ವಿಭಾಗದಲ್ಲಿ ಬೀದಿಗಳಲ್ಲಿರುವ ಕಂಬಿಗಳು ಮೆಟ್ಟಿಲುಗಳ ಮೇಲೆ ಸ್ಕೇಟ್ ಮಾಡಬಹುದು’ ಎಂದು ಬಿ.ಆರ್. ನಾಯ್ಡು ತಿಳಿಸಿದರು. ‘ನಗರದ ಹಲವು ಕಡೆ ಮುಖ್ಯರಸ್ತೆಯಲ್ಲಿ ಕೆಲವರು ಸ್ಕೇಟ್ ಬೋರ್ಡ್ ಆಡುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಸ್ಕೇಟ್ ಬೋರ್ಡ್ ಆಡುವ ಆಸಕ್ತರು ಇಲ್ಲಿಗೆ ಬರಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.