ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಕಾರಿಡಾರ್‌ಗೆ ಸೇನಾ ಆಯಾಮವಿಲ್ಲ

ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾ ಫೈಸಲ್‌ ಸ್ಪಷ್ಟನೆ
Last Updated 28 ಡಿಸೆಂಬರ್ 2018, 11:01 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಚೀನಾ– ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ದ್ವಿಪಕ್ಷೀಯ ಆರ್ಥಿಕ ಯೋಜನೆಯಾಗಿದ್ದು, ಇದಕ್ಕೆ ಯಾವುದೇ ಸೇನಾ ಆಯಾಮವಿಲ್ಲ ಎಂದು ಪಾಕಿಸ್ತಾನ ಸರ್ಕಾರ ಸ್ಪಷ್ಟಪಡಿಸಿದೆ.

‘₹ 4.2 ಲಕ್ಷ ಕೋಟಿ (60 ಬಿಲಿಯನ್‌ ಡಾಲರ್‌) ವೆಚ್ಚದಲ್ಲಿ ಜಾರಿಯಾಗುತ್ತಿರುವ ಆರ್ಥಿಕ ಕಾರಿಡಾರ್‌ನಲ್ಲಿ ಯುದ್ಧವಿಮಾನ, ಸೇನಾ ಹಾರ್ಡ್‌ವೇರ್‌ ಉಪಕರಣಗಳನ್ನು ಗೌಪ್ಯವಾಗಿ ತಯಾರಿಸಲಾಗುತ್ತಿದೆ. ಪಾಕಿಸ್ತಾನ ಹಾಗೂ ಚೀನಾದ ವಾಯುಸೇನೆ ಅಧಿಕಾರಿಗಳು ಈ ಪ್ರಸ್ತಾವಕ್ಕೆ ಅಂತಿಮ ರೂಪುರೇಷೆ ನೀಡಿದ್ದಾರೆ’ ಎಂದು ಅಮೆರಿಕದ ನಿಯತಕಾಲಿಕೆ ‘ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿತ್ತು. ಈ ಬಗ್ಗೆವಿದೇಶಾಂಗ ಇಲಾಖೆಯ ವಕ್ತಾರ ಮೊಹಮ್ಮದ್‌ ಫೈಸಲ್‌ ಅವರು ಸ್ಪಷ್ಟನೆ ನೀಡಿದ್ದಾರೆ.

‘ಸಿಪಿಇಸಿ ಜಾರಿಯಿಂದ ಪಾಕಿಸ್ತಾನದ ಆರ್ಥಿಕತೆ ಸುಧಾರಿಸಲಿದ್ದು, ಇಂಧನ ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದೇಶಕ್ಕೆ ಲಾಭವಾಗಲಿದೆ. ಇದೊಂದು ಪೂರ್ಣ ಪ್ರಮಾಣದ ಆರ್ಥಿಕ ಯೋಜನೆಯಾಗಿದ್ದು, ಯಾವುದೇ ದೇಶದ ವಿರುದ್ಧ ಕೈಗೊಂಡಿಲ್ಲ’ ಎಂದು ಫೈಸಲ್ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT