ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಷಿಕಾಗೊದಲ್ಲಿ ಗುಂಡಿನ ದಾಳಿಗೆ 3 ಮಕ್ಕಳ ಸಾವು 

Last Updated 28 ಜೂನ್ 2020, 21:08 IST
ಅಕ್ಷರ ಗಾತ್ರ

ಷಿಕಾಗೊ: ವಾರಾಂತ್ಯದ ಸಂಭ್ರಮದಲ್ಲಿ ತೊಡಗಿದ್ದ ಜನರ ಮೇಲೆ ಬಂದೂಕುಧಾರಿಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಮೂರು ಮಕ್ಕಳು ಅಸುನೀಗಿದ್ದಾರೆ.

ಈ ಪೈಕಿ, 10 ವರ್ಷದ ಬಾಲಕಿಯ ತಲೆಗೇ ಗುಂಡು ಹೊಕ್ಕಿದೆ.ಒಂದು ವರ್ಷದ ಮಗು ಮತ್ತು 17 ವರ್ಷದ ಬಾಲಕನೂ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಲೋಗಾನ್‌ ಸ್ಕ್ವೇರ್‌ನಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಪ್ರಾಥಮಿಕ ಮಾಹಿತಿ ಪ್ರಕಾರ, ಪುರುಷರ ಗುಂಪೊಂದು ಗುಂಡಿನ ಚಕಮಕಿಯಲ್ಲಿ ತೊಡಗಿತ್ತು. ಪರಸ್ಪರರು ಗುಂಡಿನ ದಾಳಿ ನಡೆಸುತ್ತಿದ್ದರು. ಈ ವೇಳೆ ಮಕ್ಕಳು ಬಲಿಯಾಗಿದ್ದಾರೆ. ಈವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT