ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಸ್‌ ಸೋಂಕು ತಡೆ ಕೇಂದ್ರವಾಗಿದ್ದ ಹೊಟೇಲ್‌ ಕಟ್ಟಡ ಕುಸಿದು 20 ಮಂದಿ ಸಾವು 

Last Updated 10 ಮಾರ್ಚ್ 2020, 8:39 IST
ಅಕ್ಷರ ಗಾತ್ರ
ADVERTISEMENT
""

ಬೀಜಿಂಗ್: ಕೊರೊನಾ ವೈರಸ್‌ ಸೋಂಕು ತಡೆ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದ್ದ ಚೀನಾದ ಫ್ಯೂಜಿಯಾನ್‌ ಪ್ರಾಂತ್ಯದ ಹೊಟೇಲ್‌ ಕುಸಿದ ಪರಿಣಾಮ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದಾರೆ.

ಕ್ವಾಂಝುವಾ ಸಿಟಿಯ ಕ್ಸಿನ್‌ಜಿಯಾ ಹೊಟೇಲ್‌ನ್ನು ಸೋಂಕು ತಡೆ ಕೇಂದ್ರವಾಗಿ ಬಳಸಲಾಗುತ್ತಿತ್ತು. ವೈರಸ್‌ ಸೋಂಕಿಗೆ ಒಳಗಾದವರ ಸಂಪರ್ಕಕ್ಕೆ ಬಂದು ಸೋಂಕು ತಗುಲಿಸಿಕೊಂಡವರ ಮೇಲೆ ನಿಗಾವಹಿಸಿ, ಸೋಂಕು ಹರಡದಂತೆ ನಿಯಂತ್ರಿಸುವ ಸಲುವಾಗಿ ಹೊಟೇಲ್‌ ಕಟ್ಟಡ ಬಳಕೆಯಾಗಿತ್ತು. ಶನಿವಾರ ಹೊಟೇಲ್‌ ಕಟ್ಟಡ ಕುಸಿದಿದೆ.

ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ 61 ಜನರನ್ನು ಹೊರಗೆ ತರಲಾಗಿದ್ದು, ಆ ಪೈಕಿ 20 ಮಂದಿ ಸಾವಿಗೀಡಾಗಿದ್ದಾರೆ.

ಸೋಮವಾರ ರಾತ್ರಿ, 10 ವರ್ಷದ ಬಾಲಕ ಮತ್ತು ಆತನ ತಾಯಿಯನ್ನು ಅವಶೇಷಗಳ ಅಡಿಯಿಂದರಕ್ಷಿಸಲಾಗಿತ್ತು. ಸುಮಾರು 52 ಗಂಟೆಗಳು ತಾಯಿ ಮತ್ತು ಮಗ ಕಟ್ಟಡದ ಅವಶೇಷಗಳ ಮಧ್ಯೆ ಸಿಲುಕಿದ್ದರು. ಕಟ್ಟಡ ಕುಸಿದಾಗ ಒಟ್ಟು 71 ಮಂದಿ ಸಿಲುಕಿದ್ದರು ಹಾಗೂ 9 ಮಂದಿ ರಕ್ಷಿಸಿಕೊಳ್ಳಲು ಯಶಸ್ವಿಯಾದರು. ಇನ್ನೂ ಹತ್ತು ಮಂದಿ ಅಲ್ಲಿಯೇ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಕಟ್ಟಡದ ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ ಸಿಟಿಯಿಂದ ವ್ಯಾಪಿಸಿದ ಮಾರಣಾಂತಿಕ ಕೊರೊನಾ ವೈರಸ್‌, ಚೀನಾದಲ್ಲಿ 3,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT