ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ಗೆ ವಾಗ್ದಂಡನೆ ಸೆನೆಟ್‌ಗೆ ಆರೋಪಪಟ್ಟಿ

Last Updated 16 ಜನವರಿ 2020, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ವಾಗ್ದಂಡನೆಗೆ ಸಂಬಂಧಿಸಿದಂತೆ ಅಮೆರಿಕದ ಜನ ಪ್ರತಿನಿಧಿಗಳ ಸಭೆ ನಿರ್ಣಯವನ್ನು ಅಂಗೀಕರಿಸಿದ್ದು, ವಿಚಾರಣೆಗಾಗಿ ಆರೋಪಪಟ್ಟಿಯನ್ನು ಸೆನೆಟ್‌ಗೆ(ಮೇಲ್ಮನೆ) ಸಲ್ಲಿಸಿದೆ.

ಅಧಿಕಾರ ದುರ್ಬಳಕೆ ಆರೋಪದಡಿ,ಟ್ರಂಪ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ವಾಗ್ದಂಡನೆ ನಿರ್ಣಯವನ್ನು ಮಂಡಿಸಲಾಗಿತ್ತು. 435 ಸದಸ್ಯರಿರುವಜನಪ್ರತಿನಿಧಿಗಳ ಸಭೆಯಲ್ಲಿ ಡೆಮಾಕ್ರಟಿಕ್‌ ಪಕ್ಷವು ಬಹುಮತ ಹೊಂದಿದ್ದು, ನಿರ್ಣಯದ ಪರವಾಗಿ 228, ವಿರುದ್ಧವಾಗಿ 193 ಮತಗಳು ಚಲಾವಣೆಗೊಂಡಿವೆ. ಸೆನೆಟ್‌ನಲ್ಲಿ ವಾದ ಮಂಡಿಸಲು ಸಂಸದ ಆ್ಯಡಂ ಶಿಫ್‌ ನೇತೃತ್ವದಏಳು ಸದಸ್ಯರ ವಿಚಾರಣಾ ತಂಡವನ್ನು ಸಭೆ ನೇಮಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಟ್ರಂಪ್‌, ‘ಏನೂ ಮಾಡಲು ಸಾಧ್ಯವಾಗದ ಡೆಮಾಕ್ರಟಿಕ್‌ ಪಕ್ಷ ಕುತಂತ್ರದ ದಾರಿ ಹಿಡಿದಿದೆ’ ಎಂದಿದ್ದಾರೆ.

100 ಸದಸ್ಯರ ಸೆನೆಟ್‌ನಲ್ಲಿ ರಿಪಬ್ಲಿಕನ್‌ ಪಕ್ಷವು ಬಹುಮತ(53) ಹೊಂದಿದ್ದು, ಟ್ರಂಪ್‌ ಭವಿಷ್ಯ ಇಲ್ಲಿ ನಿರ್ಧಾರವಾಗಲಿದೆ. ಜ.21ರಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜಾನ್‌ ರಾಬರ್ಟ್ಸ್‌ ಅಧ್ಯಕ್ಷತೆಯಲ್ಲಿ ವಿಚಾರಣೆ ಪ್ರಾರಂಭವಾಗುವ ಸಾಧ್ಯತೆ ಇದೆ.

ಸೆನೆಟ್‌ನಲ್ಲಿ ರಿಪಬ್ಲಿಕನ್‌ ಪಕ್ಷಕ್ಕೆ ಬಹುಮತ ಇರುವುದರಿಂದ ವಾಗ್ದಂಡನೆ ಸುಳಿಯಿಂದ ಟ್ರಂಪ್‌ ನಿರಾಯಾಸವಾಗಿ ಪಾರಾಗುವ ವಿಶ್ವಾಸವನ್ನು ಶ್ವೇತಭವನ ಹೊಂದಿದೆ.

ಹತ್ತಾರು ಪೆನ್‌ ಬಳಕೆ: ಆರೋಪಪಟ್ಟಿಗೆ ಸಹಿ ಹಾಕುವ ಸಂದರ್ಭದಲ್ಲಿ ಸಂಸತ್‌ ಸ್ಪೀಕರ್‌ ನ್ಯಾನ್ಸಿ ಪೆಲೊಸಿ ಎರಡು ಟ್ರೇಗಳಲ್ಲಿದ್ದ 10ಕ್ಕೂ ಅಧಿಕ ಪೆನ್‌ಗಳನ್ನು ಬಳಸಿದ್ದು ಕುತೂಹಲ ಮೂಡಿಸಿದೆ. ಸಹಿ ಹಾಕಿದ ಬಳಿಕ ಈ ಪೆನ್‌ಗಳನ್ನು ಪೆಲೊಸಿ, ತನಿಖಾ ತಂಡದ ಸದಸ್ಯರಿಗೆ ನೀಡಿದರು. ಪೆನ್‌ಗಳಲ್ಲಿ ಪೆಲೊಸಿ ಅವರ ಸಹಿ ಮುದ್ರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT